
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ಪುರಸಭೆಯಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
28 ಸೆಕೆಂಡುಗಳ ಕ್ಲಿಪ್ ಅನ್ನು ಅವರು ಟ್ವೀಟರ್ನಲ್ಲಿ ಶೇರ್ ಮಾಡಿದ್ದು, ಇದೊಂದು ಅಪರೂಪದ ಕ್ಷಣ. ತಾಯಿ ಆನೆಯು ಭಾರೀ ಮಳೆಯಿಂದ ತನ್ನ ಮರಿಯನ್ನು ರಕ್ಷಿಸಲು ತನ್ನ ದೇಹವನ್ನೇ ಛತ್ರಿಯಂತೆ ಬಳಸಿತು ಎಂದು ಶಿಷಿರ್ಕೆ ನೀಡಿದ್ದಾರೆ.
ಸಾಹು ಅವರ ವೀಡಿಯೊವನ್ನು ವೀಕ್ಷಿಸಿದ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲಮೊಮ್ಮೆ ಪ್ರಾಣಿಗಳು ಸಹ ಪ್ರೀತಿ ಮತ್ತು ವಾತ್ಸಲ್ಯದಿಂದ ಹೇಗೆ ನೋಡಿಕೊಳ್ಳಬೇಕೆಂದು ನಮಗೆ ಕಲಿಸುತ್ತವೆ. ಇಂದಿನ ಹಣ ಆಧಾರಿತ ಪ್ರಪಂಚದಲ್ಲಿ ಇದು ಸುಂದರವಾಗಿ ಕಾಣುತ್ತದೆ…. ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ತಿಂಗಳು ಇದೇ ರೀತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಮಿಳುನಾಡಿನ ಸತ್ಯಮಂಗಲಂ ಮುನ್ಸಿಪಾಲಿಟಿಯಲ್ಲಿ ತೆಗೆದಿರುವ ವಿಡಿಯೋದಲ್ಲಿ ಆನೆಗಳ ಹಿಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ನವಜಾತ ಮರಿಯನ್ನು ತಮ್ಮ ಪಾದಗಳ ನಡುವೆ ರಕ್ಷಿಸಿ ಕರೆದೊಯ್ಯುವುದು ಕಾಣಿಸಿತ್ತು.
https://twitter.com/lshan4567/status/1546304277098164225?ref_src=twsrc%5Etfw%7Ctwcamp%5Etweetembed%7Ctwterm%5E1546304277098164225%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fmother-elephant-protects-calf-from-rain-nilgiri-hills-8022531%2F