ಗ್ವಾಟೆಮಾಲಾದ ಅಕಾಟೆನಾಂಗೊ ಜ್ವಾಲಾಮುಖಿಯ ಮೇಲೆ ಮಿಂಚು ಹೊಡೆದಿರುವ ದೃಶ್ಯ ಗೋಚರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಂಚಿನ ಹೊಡೆತ ಜ್ವಾಲಾಮುಖಿಯ ಮೇಲೆ ಮೇಲ್ಮುಖವಾಗಿ ಗುಂಡು ಹಾರಿಸುವಂತೆ ಕಾಣಿಸಿಕೊಂಡಿದೆ.
ಜುಲೈ 10 ರಂದು ಗುಡುಗು ಸಹಿತ ಮಳೆ ಸುರಿಯುತ್ತಿದ್ದ ವೇಳೆ ಮಿಂಚು ಗೋಚರಿಸಿತು. ಈ ವೇಳೆ ದಾರಿಹೋಕ ಡೆರಿಕ್ ಸ್ಟೀಲ್ ಈ ವಿಡಿಯೋವನ್ನು ತೆಗೆದಿದ್ದು, ಇದೀಗ ವೈರಲ್ ಆಗಿದೆ.
ಆದರೆ, ಮಿಂಚಿನ ಹೊಡೆತ ಜ್ವಾಲಾಮುಖಿಯಿಂದ ಮೇಲಕ್ಕೆ ಹಾರಲಿಲ್ಲ. ಇದು ಆಪ್ಟಿಕಲ್ ಭ್ರಮೆಯಾಗಿದೆ. ಜ್ವಾಲಾಮುಖಿಯ ಎರಡು ಶಿಖರಗಳಾದ ಪಿಕೊ ಮೇಯರ್ ಮತ್ತು ಯೆಪೋಕಾಪಾಗಳು ಬಿರುಗಾಳಿಯ ಮೋಡಗಳಿಂದ ಆವೃತವಾಗಿದ್ದು, ಚಂಡಮಾರುತದ ಸಮಯದಲ್ಲಿ ಜ್ವಾಲಾಮುಖಿಗೆ ಮಿಂಚು ಹೊಡೆಯುವ ದೃಶ್ಯ ಅದ್ಭುತವಾಗಿ ಕಂಡುಬಂದಿದೆ. ಈ ಅಪರೂಪದ ವಿದ್ಯಮಾನ ಕಂಡು ನೆಟ್ಟಿಗರು ಚಕಿತಗೊಂಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ.