
ಚಿತ್ರದುರ್ಗ: ಸಿಡಿಲು ಬಡಿದು 106 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ನಡೆದಿದೆ.
ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಪರಿಣಾಮ ಕುರಿಹಟ್ಟಿಯಲ್ಲಿದ್ದ ಕುರಿಗಳು ಸಿಡಿಲ ಹೊಡೆತಕ್ಕೆ ಸಾವನ್ನಪ್ಪಿವೆ. ಕುರಿಗಾಹಿ ಆಂಜನೇಯ ಎಂಬುವವರ 90 ಕುರಿಗಳು ಓಬಣ್ಣ ಎಂಬುವವರ 9 ಕುರಿಗಳು ಸೇರಿದಂತೆ 106 ಕುರಿಗಳು ಸಿಡಿಲಿಗೆ ಸಾವನ್ನಪ್ಪಿವೆ.
ಜೀವನೋಪಾಯಕ್ಕೆ ದಾರಿಯಾಗಿದ ಕುರಿಗಳು ಸಿಡಿಲಿಗೆ ಬಲಿಯಾಗಿದ್ದು, ಕುರಿಗಾಹಿಗಳು ಕಣ್ಣೀರಿಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.