
ಕೊಪ್ಪಳ: ಸಿಡಿಲಿಗೆ ಕೂಲಿ ಕಾರ್ಮಿಕ ಮತ್ತು ಎರಡು ಎಮ್ಮೆಗಳು ಬಲಿಯಾದ ಎರಡು ಪ್ರತ್ಯೇಕ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೊಡರಕೇರಾ ಗ್ರಾಮದ ಅಮೋಘ ಸಿದ್ದಯ್ಯ ಗುರುವಿನ(32) ಮೃತಪಟ್ಟವರು ಎಂದು ಹೇಳಲಾಗಿದೆ. ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಅಮೋಘ ಸಾವನ್ನಪ್ಪಿದ್ದಾರೆ.
ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎಮ್ಮೆ ಸಾವನ್ನಪ್ಪಿವೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ.