
ಕೆಟ್ಟ ದೃಷ್ಟಿ ಮನುಷ್ಯನ ಮೇಲೆ ಬಿದ್ದರೆ ಆತನ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಕೆಟ್ಟ ದೃಷ್ಟಿಯನ್ನು ನಿವಾರಿಸಲು ಮನೆಯ ಮುಂದೆ ಈ ದೀಪವನ್ನು ಹಚ್ಚಿ.
ಕೆಲವರು ಬೇರೆಯವರ ಏಳಿಗೆ ಕಂಡು ಅಸೂಯೆ ಪಡುತ್ತಾರೆ. ಅವರ ಮೇಲೆ ತಮ್ಮ ಕೆಟ್ಟ ದೃಷ್ಟಿಯನ್ನು ಹರಿಸುತ್ತಾರೆ. ಕೆಟ್ಟ ದೃಷ್ಟಿ ಮನೆ ಹಾಗೂ ಕುಟುಂಬ ಸದಸ್ಯರ ಮೇಲೆ ಬಿದ್ದರೆ ಅದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ. ಹಾಗಾಗಿ ಈ ಕೆಟ್ಟ ದೃಷ್ಟಿಯನ್ನು ನಿವಾರಿಸಿಕೊಳ್ಳಲು ಈ ವಿಧಾನ ಅನುಸರಿಸಿ.
ಅಮಾವಾಸ್ಯೆಯಂದು ಮನೆಯ ಮುಂದೆ ಬಲಿ ದೀಪವನ್ನು ಹಚ್ಚಬೇಕು. ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಬೆಲ್ಲವನ್ನು ಮಿಕ್ಸ್ ಮಾಡಿ ದೀಪದ ರೀತಿಯಾಗಿ ಮಾಡಿ ಮೂರು ಬತ್ತಿಯನ್ನು ಇಟ್ಟು ಎಳ್ಳೆಣ್ಣೆ ಹಾಕಿ ಬಾಳೆ ಎಲೆ ಅಥವಾ ವೀಳ್ಯದೆಲೆಯಲ್ಲಿ ಇಟ್ಟು ಮನೆಯ ಮುಖ್ಯದ್ವಾರದ ಮುಂದೆ ಬೆಳಗಿಸಬೇಕು. ಅದರ ಮುಂದೆ ಅನ್ನ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಇಡಬೇಕು. ಇದರಿಂದ ನರದೃಷ್ಟಿ ದೋಷಗಳು ಕಳೆದು ಲಕ್ಷ್ಮಿ ಕೃಪೆ ನಿಮ್ಮ ಮೇಲಾಗುತ್ತದೆ.