
ಅಮೆರಿಕಾದಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ನಟ-ನಟಿ ಇಬ್ಬರೂ ಕೂಡ ಚಿತ್ರೀಕರಣದ ವೇಳೆ ಮೋಜು ಮಾಡಿದ್ದಾರೆ. ನಟಿ ಅನನ್ಯಾ ಪಾಂಡೆ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಾವಿಬ್ಬರೂ ಕುದುರೆ ಸವಾರಿ ಮಾಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ಟ್ಯಾಗ್ ಮಾಡಿರುವ ನಟಿ ‘ಹೌಡಿ ರೌಡಿ’ ಎಂದು ಬರೆದಿದ್ದಾರೆ. ಅಂದಹಾಗೆ, ವಿಜಯ್ ರೌಡಿ ಕ್ಲಬ್ ಎಂಬ ಬಟ್ಟೆ ಬ್ರ್ಯಾಂಡ್ ಅನ್ನು ಹೊಂದಿದ್ದಾರೆ.
ಲಿಗರ್ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದಾರೆ ಮತ್ತು ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕರಣ್ ಜೋಹರ್, ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಜಂಟಿಯಾಗಿ ನಿರ್ಮಿಸಿದ್ದಾರೆ.
ಅನನ್ಯಾ ಪಾಂಡೆ ಬಾಲಿವುಡ್ ನಟ ಚಂಕಿ ಪಾಂಡೆ ಮತ್ತು ಉದ್ಯಮಿ ಭಾವನಾ ಪಾಂಡೆ ಅವರ ಪುತ್ರಿ. ಅವರು 2019 ರಲ್ಲಿ ಧರ್ಮ ಪ್ರೊಡಕ್ಷನ್ಸ್‌ನ ‘ಸ್ಟೂಡೆಂಟ್ ಆಫ್ ದಿ ಇಯರ್-2’ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.
