ಪಟಿಯಾಲಾ: ಪಂಜಾಬ್ ನ ಪಟಿಯಾಲಾದಲ್ಲಿ ಮಹಿಳಾ ಹಾಸ್ಟೆಲ್ ಗೆ ನುಗ್ಗಿದ ವೇಟ್ ಲಿಫ್ಟರ್ ಅಚಿಂತಾ ಶೆಹುಲಿ ಸಿಕ್ಕಿಬಿದ್ದು ಅವರನ್ನು ಶಿಬಿರದಿಂದ ಹೊರಹಾಕಲಾಗಿದೆ.
ಪ್ಯಾರೀಸ್ ಒಲಿಂಪಿಕ್ಸ್ ಪೂರ್ವ ಸಿದ್ಧತಾ ಶಿಬಿರದಲ್ಲಿ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅಚಿಂತಾ ಶೆಹುಲಿ ಪಾಲ್ಗೊಂಡಿದ್ದಾರೆ. ಗುರುವಾರ ರಾತ್ರಿ ಪಟಿಯಾಲಾದ ಎನ್ಐಎಸ್ ತರಬೇತಿ ಕೇಂದ್ರದಲ್ಲಿ ಮಹಿಳಾ ಹಾಸ್ಟೆಲ್ ಗೆ ತೆರಳಿದ್ದಾರೆ. ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿ ಅಚಿಂತ್ಯಾ ಅವರನ್ನು ಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶಿಬಿರದಿಂದ ಅವರನ್ನು ಹೊರ ಹಾಕಲಾಗಿದ್ದು, ಒಲಿಂಪಿಕ್ಸ್ ಕನಸು ಬಹುತೇಕ ಭಗ್ನಗೊಂಡಂತಾಗಿದೆ ಎಂದು ಹೇಳಲಾಗಿದೆ.