alex Certify ಫುಡ್ ಡೆಲಿವರಿ ಬಾಯ್ ಮಾಡಿದ ಟ್ರಿಕ್ ನೋಡಿ ದಂಗಾದ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಡ್ ಡೆಲಿವರಿ ಬಾಯ್ ಮಾಡಿದ ಟ್ರಿಕ್ ನೋಡಿ ದಂಗಾದ ಜನ….!

ಮಹಾ ನಗರಗಳಲ್ಲಿ ಫುಡ್​ ಡೆಲವರಿ ಕೆಲಸ ಹೆಸರುವಾಸಿಯಾಗಿದೆ. ಪಾರ್ಟ್​ ಟೈಂ, ಫುಲ್​ ಟೈಂ, ಅಗತ್ಯ ಇದ್ದಾಗಲಷ್ಟೆ ಕೆಲಸ ಮಾಡಲು ಅವಕಾಶ ಕೊಟ್ಟಿದೆ. ಈ ಫುಡ್​ ಡೆಲಿವರಿ ಬಾಯ್​ಗಳ ಕರ್ತವ್ಯನಿಷ್ಠೆ ಬಗ್ಗೆ ಆಗಾಗ್ಗೆ ಜಾಲತಾಣದಲ್ಲಿ ಒಂದಷ್ಟು ಸ್ವಾರಸ್ಯಕರ ವಿಚಾರವೂ ಬರುತ್ತಿರುತ್ತದೆ. ಈಗಲೂ ಅಂತಹದ್ದೊಂದು ಸುದ್ದಿ ಬಂದಿದೆ.

ಡೆಲಿವರಿ ಬಾಯ್​ ಒಬ್ಬ ಇತ್ತೀಚೆಗೆ ತನ್ನ ಟಿಕ್​ಟಾಕ್​ ಫಾಲೋಯರ್​ಗಳ ಮುಂದೆ ಫೈನಾನ್ಶಿಯಲ್​ ಹ್ಯಾಕ್​ ಬಗ್ಗೆ ಹಂಚಿಕೊಂಡಿದ್ದಾನೆ.

ಸೈಮನ್​ ಫ್ರೇಸರ್​ ಎಂಬಾತ ಫುಡ್ ಅನ್ನು ಹೇಗೆ ಆರ್ಡರ್​ ಮಾಡುತ್ತಾರೆ ಮತ್ತು ಅದನ್ನು ಸ್ವತಃ ತೆಗೆದುಕೊಳ್ಳುತ್ತಾರೆ ಮತ್ತು ಆ ಸೇವೆಗಾಗಿ ಪಾವತಿಸುತ್ತಾರೆ ಎಂದು ಆತ ಉಲ್ಲೇಖಿಸಿದ್ದಾನೆ.

ಆತ ಮಾಹಿತಿ ಹಂಚಿಕೊಂಡಾಗಿನಿಂದ ಲಕ್ಷಗಟ್ಟಲೆ ವೀಕ್ಷಣೆಯಾಗಿ ವೈರಲ್​ ಆಗಿದೆ. ಸೈಮನ್​ ರೆಸ್ಟೋರೆಂಟ್​ನ ಮೇಲೆ ವಾಸಿಸುತ್ತಿದ್ದು, ಡೋರ್​ಡ್ಯಾಶ್​ ಡ್ರೈವರ್‌ ಆಗಿ ಕೆಲಸ ಮಾಡುತ್ತಾನೆ.

ಆತ ಹನ್ನೆರಡು ಡಾಲರ್​ಗಳಿಗಿಂತ ಹೆಚ್ಚಿನ ಮೊತ್ತದ ಆರ್ಡರ್​ಗಳಲ್ಲಿ ಅನಿಯಮಿತ ಉಚಿತ ಡೆಲಿವರಿಗಳನ್ನು ಪಡೆಯಲು ಬಳಕೆದಾರರಿಗೆ ಅನುಮತಿಸುವ ಡೋರ್​ಪಾಸ್​ ಅನ್ನು ಸಹ ಪಡೆಯುತ್ತಾನೆ.

ನಾನು ಡೋರ್​ಡ್ಯಾಶ್​ಗೆ ಡ್ಯಾಶರ್​ ಆಗಿ ಕೆಲಸ ಮಾಡುತ್ತೇನೆ. ನಾನು ರೆಸ್ಟೋರೆಂಟ್​ನ ಮೇಲೆ ವಾಸಿಸುತ್ತಿದ್ದೇನೆ, ನನ್ನ ಕ್ರೆಡಿಟ್​ ಕಾರ್ಡ್​ನಲ್ಲಿ ಡ್ಯಾಶ್​ಪಾಸ್​ ಅನ್ನು ಹೊಂದಿದ್ದೇನೆ ಅದು ನನಗೆ ಉಚಿತ ಡೆಲಿವರಿ ನೀಡುತ್ತದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸೈಮನ್​ ಡೋರ್​ಡ್ಯಾಶ್​ ಮೂಲಕ ಕೆಳಗಿನ ರೆಸ್ಟೋರೆಂಟ್​ನಿಂದ ಆರ್ಡರ್​ ಮಾಡುತ್ತಾನೆ, ನಂತರ ಡ್ಯಾಶರ್​ ಅಪ್ಲಿಕೇಶನ್​ನಲ್ಲಿ ತ್ವರಿತವಾಗಿ ಲಾಗ್​ ಇನ್​ ಮಾಡಿ ಮತ್ತು ಆರ್ಡರ್​ ಅನ್ನು ಕ್ಲೇಮ್​ ಮಾಡುತ್ತಾನೆ. ನಂತರ ಆರ್ಡರ್​ ತೆಗೆದುಕೊಳ್ಳಲು ರೆಸ್ಟೋರೆಂಟ್​ಗೆ ಹೋಗಿ ಅದನ್ನು ತೆಗೆದುಕೊಳ್ಳಲು ಹಣ ಪಡೆಯುತ್ತಾರೆ.

ಈತನ ಚಾಕಚಕ್ಯತೆ ಬಗ್ಗೆ ಟಿಕ್​ಟಾಕ್​ನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಪ್ರತಿಭೆ ಎಂದು ಕರೆದರೆ, ಕೆಲವರು ಆರ್ಥಿಕ ಸಲಹೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದರು.

ರೆಸ್ಟೋರೆಂಟ್​ನಿಂದ ನೇರವಾಗಿ ಆರ್ಡರ್​ ಮಾಡುವುದು ಅಗ್ಗವಾಗುವುದಿಲ್ಲವೇ, ಡೋರ್​ ಡ್ಯಾಶ್​ ಡೆಲಿವರಿ ಹೊರತು ಹಲವಾರು ಶುಲ್ಕಗಳನ್ನು ಸೇರಿಸಿರುತ್ತದೆ ಎಂದು ಒಬ್ಬರು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...