ನವದೆಹಲಿ: ಎಲ್ಐಸಿ 2023- 24ನೇ ಸಾಲಿನಲ್ಲಿ ಪಾಲಿಸಿಯ ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ಬಳಿಕವೂ ಚಂದಾದಾರರ 881 ಕೋಟಿ ರೂಪಾಯಿ ಉಳಿದುಕೊಂಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಮಾಹಿತಿ ನೀಡಿ, 3.72 ಲಕ್ಷ ಪಾಲಿಸಿದ್ದಾರರು ವಿಮೆ ಮೊತ್ತವನ್ನು ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.
2022- 23ನೇ ಸಾಲಿನಡಿ 3.73 ಲಕ್ಷ ಪಾಲಿಸಿದಾರರಿಗೆ ಸೇರಿದ 815 ಕೋಟಿ ರೂಪಾಯಿ ಮೊತ್ತ ಭಾರತೀಯ ಜೀವ ವಿಮಾ ನಿಗಮದಲ್ಲಿಯೇ ಇದೆ. ಚಂದಾದಾರರಿಗೆ ಎಲ್ಐಸಿ ಖಾತೆಯಲ್ಲಿ ಉಳಿದ ಮೊತ್ತವನ್ನು ವಾಪಸ್ ನೀಡಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳಲಿ ಜಾಹೀರಾತು ಪ್ರಕಟಿಸಿ ಅರಿವು ಮೂಡಿಸಲಾಗುತ್ತಿದೆ. ಪಾಲಿಸಿದಾರರ ವಿಳಾಸಗಳಿಗೆ ಅಂಚೆ, ಇ-ಮೇಲ್, ಮೊಬೈಲ್ ಸಂಖ್ಯೆಗಳಿಗೆ ಸಂದೇಶ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.