ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ತನ್ನ ಲೋಗೋವನ್ನು ಅನಧಿಕೃತವಾಗಿ ಬಳಸಿಕೊಂಡು ಗ್ರಾಹಕರನ್ನು ಸೆಳೆಯಲು ಯತ್ನಿಸುವ ಮಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಲೋಗೋ ಬಳಸಿಕೊಂಡು, ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ಗಳ ಮೂಲಕ ಮಾಡುವ ಕುತಂತ್ರಗಳಿಗೆ ಜನರು ಬಲಿಯಾಗಬಾರದೆಂದು ಎಲ್ಐಸಿ ಅದಾಗಲೇ ಎಚ್ಚರಿಕೆಯ ನೋಟಿಸ್ ಹೊರಡಿಸಿದೆ.
“ನಮ್ಮ ಟ್ರೇಡ್ಮಾರ್ಕ್ಗಳು/ಸೇವಾ ಚಿಹ್ನೆಗಳನ್ನು ಬಳಸಿಕೊಂಡು ’ವಿಮೆ ಹಾಗೂ ವಿಮಾ ಸಲಹೆಯಂಥ’ ಅನೇಕ ಸೇವೆಗಳನ್ನು ಗ್ರಾಹಕರಿಗೆ ಕೊಡುವ ಪ್ರಯತ್ನದಲ್ಲಿ ಕೆಲವು ಅನಧಿಕೃತ ಸೇವಾದಾರರು ಹಾಗೂ ಏಜೆಂಟ್ಗಳು ಜಾಲತಾಣ ಹಾಗೂ ಅಪ್ಲಿಕೇಶನ್ಗಳನ್ನು ಸೃಷ್ಟಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮದೇ ಡೊಮೇನ್ ಹೆಸರಿನಂತೆ ಕಾಣುವ ಡೊಮೇನ್ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ಮೂರ್ಖರನ್ನಾಗಿಸಲು, ನಮ್ಮಿಂದಲೇ ಅನುಮೋದನೆ ಪಡೆದಿರುವಂತೆ ಮಾಹಿತಿಗಳನ್ನು ಬಿತ್ತರಿಸುತ್ತಿದ್ದಾರೆ, ಎಂದು ಎಲ್ಐಸಿ ತನ್ನ ನೋಟಿಸ್ ಒಂದರಲ್ಲಿ ತಿಳಿಸಿದೆ.
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನಿಂದ ನಾಚಿಕೆಗೇಡಿನ ಕೃತ್ಯ, ತರಬೇತುದಾರನ ಪುತ್ರಿಯೊಂದಿಗೆ ಲೈಂಗಿಕ ಕ್ರಿಯೆ
ಇಂಥ ತಂತ್ರಾಂಶಗಳು ಹಾಗೂ ಅಪ್ಲಿಕೇಶನ್ಗಳ ವಿರುದ್ಧ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳಬಹುದಾಗಿದೆ.
“ವಾಸ್ತವಿಕ ಅಂಶಗಳು ಹಾಗೂ ಸನ್ನಿವೇಶಗಳು ಹೇಳುವಂತೆ, ಗ್ರಾಹಕರು ಹಾಗೂ ಸಾರ್ವಜನಿಕ ಮತ್ತು ಪಾಲಿಸಿದಾರರು ಇಂಥ ದುರುದ್ದೇಶಪೂರಿತವಾದ ಮತ್ತು/ಅಥವಾ ಅನಧಿಕೃತ ಮತ್ತು/ಅಥವಾ ನಮ್ಮ ಸೇವಾ ಗುರುತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಬಳಕೆ ಮಾಡುತ್ತಿದ್ದರೆ, ನಮಗೆ ತಿಳಿಸಿ ಅಂಥವರ ವಿರುದ್ಧ ಸೂಕ್ತವಾದ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಸಿವಿಲ್ ಮತ್ತು ಕ್ರಿಮಿನಲ್, ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನೆರವಾಗಿ,” ಎಂದು ನೋಟಿಸ್ನಲ್ಲಿ ತಿಳಿಸಿದೆ.