ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು ಬಿಮಾ ಜ್ಯೋತಿ ಎಂಬ ಹೊಸ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದೊಂದು ವೈಯಕ್ತಿಕ ಉಳಿತಾಯ ಮತ್ತು ವಿಮಾ ಯೋಜನೆಯಾಗಿದೆ.
ನೇರವಾಗಿ ಆನ್ ಲೈನ್ ಮೂಲಕ ಅಥವಾ ಏಜೆಂಟರ ಮೂಲಕವೂ ಪಡೆಯಬಹುದಾಗಿದೆ. ಪಾಲಿಸಿ ವರ್ಷದ ಅಂತ್ಯದ ನಂತರ ಪ್ರತಿ ಸಾವಿರ ಸಮ್ ಎಶ್ಯೂರ್ಡ್ ಗೆ 50 ರೂ. ಖಚಿತ ಹೆಚ್ಚುವರಿ ನಿಧಿ ಸಿಗಲಿದೆ. ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ದೊಡ್ಡ ಪ್ರಮಾಣದ ವಿಮಾ ನಿಧಿ ದೊರೆಯಲಿದೆ.
1 ಸಾವಿರ ಕನಿಷ್ಠ ಸಮ್ ಅಶ್ಯೂರ್ಡ್ ಆಗಿದ್ದು, ಕನಿಷ್ಠ 15 ರಿಂದ 20 ವರ್ಷಕ್ಕೆ ಪಡೆಯಬಹುದಾಗಿದೆ. ಗರಿಷ್ಠ 60 ವರ್ಷದವರು ಪಾಲಿಸಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.