ಬಂಪರ್ ರಿಟರ್ನ್ ಕೊಡಬಲ್ಲ ಸುರಕ್ಷಿತವಾದ ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತಿದ್ದೀರಾ ? ಹಾಗಾದರೆ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಮ್ಯೂಚುವಲ್ ಫಂಡ್‌ಗಳ ಮೂಲಕ ನಿಮಗೆ ಒಂದಷ್ಟು ಆಯ್ಕೆಗಳನ್ನು ಕೊಡುತ್ತಿದೆ.
ಈಕ್ವಿಟಿ ಹಾಗೂ ಡೆಟ್ ಫಂಡ್ ಸ್ಕೀಂಗಳ ಅನೇಕ ಆಯ್ಕೆಗಳನ್ನು ಎಲ್‌ಐಸಿಯ ಮ್ಯೂಚುವಲ್ ಫಂಡ್ ನಿಮಗೆ ನೀಡುತ್ತಿದೆ. ಎಲ್‌ಐಸಿಯ ಕೆಲವೊಂದು ಮ್ಯೂಚುವಲ್ ಫಂಡ್‌ಗಳು ಕಳೆದ ಐದು ವರ್ಷಗಳಲ್ಲಿ ಹೂಡಿಕೆ ಮೇಲೆ ಎರಡಂಕಿಯ ರಿಟರ್ನ್ಸ್ ನೀಡಿದ್ದು, 16.5%-18.5%ನಷ್ಟು ವಾರ್ಷಿಕ ರಿಟರ್ನ್ಸ್ ಕೊಡುತ್ತಿವೆ.
ಎಲ್‌ಐಸಿ ಎಂಎಫ್ ಲಾರ್ಜ್ ಕ್ಯಾಪ್ ಫಂಡ್:
ಕಳೆದ ಐದು ವರ್ಷಗಳಲ್ಲಿ ಎಲ್‌ಐಸಿ ಎಂಎಫ್ ಲಾರ್ಜ್ ಕ್ಯಾಪ್ ಫಂಡ್ 16.3% ಸಿಎಜಿಆರ್ ದರದಲ್ಲಿ ರಿಟರ್ನ್ಸ್ ಕೊಡುತ್ತಾ ಬಂದಿದೆ. ನೀವು ಯೋಜನೆಯಲ್ಲಿ ಒಂದು ಲಕ್ಷ ರೂ. ಹೂಡಿಕೆ ಮಾಡಿದ್ದಲ್ಲಿ, ಐದು ವರ್ಷಗಳಲ್ಲಿ ಇದೇ ದುಡ್ಡು 2.12 ಲಕ್ಷ ರೂ.ಗಳಿಗೆ ಬೆಳೆಯಲಿದೆ.
ಎಲ್‌ಐಸಿ ಎಂಎಫ್ ತೆರಿಗೆ ಯೋಜನೆ:
ಕಳೆದ ಐದು ವರ್ಷಗಳಲ್ಲಿ 16.5% ರಿಟರ್ನ್ಸ್ ಕೊಟ್ಟಿರುವ ಎಲ್‌ಐಸಿ ಎಂಎಫ್ ತೆರಿಗೆ ಯೋಜನೆಯಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದರೆ ಐದು ವರ್ಷಗಳಲ್ಲಿ ಆ ದುಡ್ಡು 2.14 ಲಕ್ಷ ರೂಪಾಯಿಗಳಾಗಿ ಬೆಳೆಯಲಿದೆ. ಮಾಸಿಕ 5,000 ರೂ. ಗಳ ಹೂಡಿಕೆಯ ಐದು ವರ್ಷಗಳಲ್ಲಿ 5.08 ಲಕ್ಷ ರೂ.ಗಳಿಗೆ ಏರುವ ಸಾಧ್ಯತೆಯೂ ಇದೆ.
ಎಲ್‌ಐಸಿ ಎಂಎಫ್ ಇಟಿಎಫ್ ನಿಫ್ಟಿ 50:
ಎಲ್‌ಐಸಿ ಎಂಎಫ್ ಇಟಿಎಫ್ ನಿಫ್ಟಿ 50 ಕಳೆದ ಐದು ವರ್ಷಗಳಲ್ಲಿ ವಾರ್ಷಿಕ 17.66% ರಿಟರ್ನ್ಸ್ ಕೊಡುತ್ತಾ ಬಂದಿದೆ. ಸ್ಕೀಂನಲ್ಲಿ ನೀವು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು ಐದು ವರ್ಷಗಳಲ್ಲಿ 2.26 ಲಕ್ಷ ರೂಪಾಯಿಗಳಾಗಿ ಬೆಳೆಯಲಿದೆ.
ಬೆರಗಾಗಿಸುವಂತಿದೆ 1 ವರ್ಷದ ಕಂದನ ತಿಂಗಳ ಗಳಿಕೆ…!
ಎಲ್‌ಐಸಿ ಎಂಎಫ್ ಲಾರ್ಜ್ & ಮಿಡ್‌ಕ್ಯಾಪ್ ಫಂಡ್:
ಈ ಯೋಜನೆಯು ಕಳೆದ ಐದು ವರ್ಷಗಳಲ್ಲಿ ಬೆಸ್ಟ್ ರಿಟರ್ನ್ಸ್ ಕೊಡುತ್ತಿರುವ ಮ್ಯೂಚುವಲ್ ಫಂಡ್ ಸ್ಕೀಂಗಳಲ್ಲಿ ಒಂದಾಗಿದೆ. ಉದಾಹರಣೆಗೆ, ಹೂಡಿಕೆದಾರರು ಕಳೆದ ಐದು ವರ್ಷಗಳಲ್ಲಿ 18.41% ಸಿಎಜಿಆರ್ ರಿಟರ್ನ್ಸ್ ಪಡೆಯುತ್ತಾ ಬಂದಿದ್ದಾರೆ.
ಎಲ್‌ಐಸಿ ಎಂಎಫ್ ಇಟಿಎಫ್ – ಸೆನ್ಸೆಕ್ಸ್:
ಎಲ್‌ಐಸಿ ಎಂಎಫ್ ಇಟಿಎಫ್ – ಸೆನ್ಸೆಕ್ಸ್ ಕಳೆದ ಐದು ವರ್ಷಗಳಲ್ಲಿ 18.5% ಸಿಎಜಿಆರ್ ರಿಟರ್ನ್ಸ್ ಕೊಡುತ್ತಾ ಬಂದಿದೆ. ಯೋಜನೆಯಲ್ಲಿ ನೀವು ಒಂದು ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಲ್ಲಿ ನಿಮಗೆ ಐದು ವರ್ಷಗಳಲ್ಲಿ ಆ ದುಡ್ಡು 2.24 ಲಕ್ಷ ರೂ.ಗಳಾಗಿ ಬೆಳೆಯಲಿದೆ.