ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಜೀವನ್ ಉಮಾಂಗ್ ಪಾಲಿಸಿ ಮೂಲಕ ಒಳ್ಳೆಯ ರಿಟರ್ನ್ಸ್ ನೀಡುವ ಪಾಲಿಸಿಯೊಂದನ್ನು ಕೊಡಮಾಡುತ್ತಿದೆ.
ಈ ಹಿಂದಿನ ಕಾರ್ಯಕ್ರಮಗಳಿಗಿಂತ ಭಿನ್ನವಾದ ಜೀವನ್ ಉಮಾಂಗ್ ಪಾಲಿಸಿಯು 90 ದಿನಗಳಿಂದ – 55 ವರ್ಷದ ವಯಸ್ಸಿನ ಯಾರಾದರೂ ತೆಗೆದುಕೊಳ್ಳಬಹುದಾಗಿದೆ. ಸುದೀರ್ಘ ಕಾಲೀನ ಹೂಡಿಕೆಯ ಯೋಜನೆಯಾದ ಜೀವನ್ ಉಮಾಂಗ್‌ನಲ್ಲಿ ಮೆಚ್ಯೂರಿಟಿ ಅವಧಿಗೆ ಭಾರೀ ಮೊತ್ತವನ್ನು ರಿಟರ್ನ್ಸ್ ಆಗಿ ನೀಡಲಾಗುವುದು. ಪ್ರತಿ ವರ್ಷ ನಿಮ್ಮ ಖಾತೆಗೆ ಸ್ಥಿರ ಆದಾಯದ ರೂಪದಲ್ಲಿ ರಿಟರ್ನ್ಸ್ ದುಡ್ಡನ್ನು ಜಮಾ ಮಾಡಲಾಗುವುದು. ಒಂದು ವೇಳೆ ಪಾಲಿಸಿದಾರರು ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಹಾಗೂ ನಾಮಿನಿಗಳಿಗೆ ಭಾರೀ ಮೊತ್ತವನ್ನ ನೀಡಲಾಗುವುದು. ಈ ಯೋಜನೆ ನಿಮ್ಮನ್ನು 100 ವರ್ಷಗಳವರೆಗೂ ಕವರ್ ಮಾಡಬಲ್ಲದು.
ಮಾಸಿಕ 1,302 ರೂ.ಗಳನ್ನು ಈ ಪಾಲಿಸಿ ಅಡಿ ನೀವು ಪಾವತಿ ಮಾಡುತ್ತಾ ಸಾಗಿದಲ್ಲಿ, ವರ್ಷವೊಂದಕ್ಕೆ 15,298 ರೂಪಾಯಿ ಕಟ್ಟಿರುತ್ತೀರಿ. ಇದೇ ಪಾಲಿಸಿಯನ್ನು 30 ವರ್ಷಗಳ ಕಾಲ ನಿರ್ವಹಿಸಿಕೊಂಡರೆ ಆ ದುಡ್ಡು 4.58 ಲಕ್ಷ ರೂ.ಗಳಾಗಿರುತ್ತದೆ. ನಿಮ್ಮ ಹೂಡಿಕೆಯ ಮೇಲೆ ಪ್ರತಿ ವರ್ಷ ರಿಟರ್ನ್ಸ್ ರೂಪದಲ್ಲಿ ಕಂಪನಿಯು ನಿಮಗೆ 40,000 ರೂಪಾಯಿ ನೀಡುತ್ತದೆ — 31ನೇ ವರ್ಷದಿಂದ 100 ವರ್ಷಗಳವರೆಗೆ ನೀವು ಬಹುತೇಕ 27.6 ಲಕ್ಷ ರೂಪಾಯಿ ಪಡೆದುಕೊಳ್ಳಲಿದ್ದೀರಿ, ಅಲ್ಲಿಯವರೆಗೂ ಬದುಕಿದ್ದರೆ.
ಹೂಡಿಕೆದಾರರ ಅಕಸ್ಮಾತ್ ಮರಣ ಅಥವಾ ಅಂಗವೈಕಲ್ಯವಾಗಿಬಿಟ್ಟಲ್ಲಿ, ವಿಮಾ ಸೌಲಭ್ಯವನ್ನೂ ಈ ಪಾಲಿಸಿ ನೀಡುತ್ತದೆ.