ನಿವೃತ್ತಿ ನಂತರದ ಬಾಳಿನ ಇಳಿಸಂಜೆಯ ಜೀವನಕ್ಕೆ ಕಾಲಿಡುವಾಗ ಪ್ರತಿಯೊಬ್ಬರು ಕೂಡ ಬಯಸುವುದು ಶಾಂತಿಯುತ, ನೆಮ್ಮದಿ ಭರಿತ ಬದುಕು. ಸುಮಾರು 40-50 ವರ್ಷಗಳ ಜೀವನ ಜಂಜಾಟದ ಬಳಿಕ ಅಳಿದು ಉಳಿದ ಜೀವನನ್ನು ನಿರಾತಂಕವಾಗಿ, ಆರ್ಥಿಕ ಮುಗ್ಗಟ್ಟುಗಳಿಲ್ಲದೆಯೇ ಕುಟುಂಬದೊಂದಿಗೆ ಕಳೆಯಲು ಹಲವರು ಹಂಬಲಿಸುತ್ತಾರೆ. ಆದರೆ ಅದಕ್ಕೆ ಬೇಕಿರುವುದು ಸರಿಯಾದ ಹೂಡಿಕೆ ಯೋಜನೆ. ಇಂಥ ವಿಶೇಷ ಪಿಂಚಣಿ ಹೂಡಿಕೆ ಯೋಜನೆಯನ್ನು ಭಾರತೀಯ ಜೀವ ವಿಮೆ (ಎಲ್‌ಐಸಿ) ಪರಿಚಯಿಸಿದೆ.
ಅದರ ಹೆಸರು ’ಎಲ್‌ಐಸಿ ಜೀವನ ಶಾಂತಿ’ ಯೋಜನೆ. ಆನ್‌ಲೈನ್ ಅಥವಾ ಆಫ್ ಲೈನ್ ಮೂಲಕ ಈ ಯೋಜನೆಯಲ್ಲಿಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಎಲ್‌ಐಸಿ ಏಜೆಂಟ್ ಗಳ ಬಳಿ ಈ ಬಗ್ಗೆ ವಿಚಾರಿಸಿ ವಿಸ್ತೃತ ಮಾಹಿತಿ ಕೂಡ ಸಂಗ್ರಹಿಸಬಹುದು. ಜಂಟಿಯಾಗಿಯೂ ಹೂಡಿಕೆ ಮಾಡಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಚಲಿಸುತ್ತಿದ್ದ ರೈಲಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಅಜ್ಜ-ಅಜ್ಜಿ, ಪೋಷಕರು, ಮಕ್ಕಳು, ಸೋದರರೊಂದಿಗೆ ಜಂಟಿಯಾಗಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ವಾರ್ಷಿಕ ಪ್ರೀಮಿಯಂ ಹೊರೆಯೂ ಕೂಡ ಕಡಿಮೆ ಆಗಲಿದೆ. ಆಫ್‌ಲೈನ್ ಹೂಡಿಕೆ ಮಾಡಿದ 15 ದಿನಗಳ ಒಳಗೆ ಪೂರ್ಣ ಹಣ ಹಿಂಪಡೆಯಲು ಅವಕಾಶವಿದೆ. ಆನ್ ಲೈನ್‌ನಲ್ಲಿ ಉಚಿತ ಲಾಕ್-ಇನ್ ಅವಧಿ 30 ದಿನಗಳಿಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ www.licindia.in ವೆಬ್‌ಸೈಟ್‌ಗೆ ಭೇಟಿ ನೀಡುವುದು.