ಅಡಮಾನದ ಲೇವಾದೇವಿದಾರ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ತನ್ನ ಕಾರ್ಯಕ್ರಮವನ್ನು ವಿಸ್ತರಿಸಿದೆ. ಗೃಹ ಸಾಲವಾಗಿ 6.66% ದರದಲ್ಲಿ ಎರಡು ಕೋಟಿ ರೂಪಾಯಿಗಳವರೆಗೂ ಎಲ್‌ಐಸಿ ಎಚ್‌ಎಫ್‌ಎಲ್ ಒದಗಿಸಲಿದೆ.
ಹೊಸ ಸಾಲಗಾರರಿಗೆ 50 ಲಕ್ಷ ರೂಪಾಯಿಗಳವರೆಗೂ 6.66 ಪ್ರತಿಶತ ದರದಲ್ಲಿ ಗೃಹ ಸಾಲಗಳನ್ನು ಎಲ್‌ಐಸಿ ಈ ವರ್ಷದ ಜುಲೈನಲ್ಲಿ ಘೋಷಿಸಿತ್ತು. ಇದೀಗ ಸಾಲದ ಮಿತಿಯನ್ನು ಎರಡು ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ದಸರಾ ಹೊಸ್ತಿಲಲ್ಲೇ ಗುಜರಾತಿಗೆ ಶಿಫ್ಟ್ ಆಗಲಿವೆ ಮೈಸೂರಿನ ಆನೆಗಳು..!
ಗುರುವಾರ ಘೋಷಣೆ ಮಾಡಲಾದ ಸಾಲವು 700ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವ ಎಲ್ಲರಿಗೂ ಲಭ್ಯವಿದೆ. ಉದ್ಯೋಗ, ವೇತನದಾರರು, ವೃತ್ತಿಪರರು/ಸ್ವಯಂ-ಉದ್ಯೋಗಿಗಳು ಎಂಬ ತಾರತಮ್ಯವಿಲ್ಲದೇ ಸಿಬಿಲ್ ಸ್ಕೋರ್ ಆಧಾರದ ಮೇಲೆ ಸಾಲ ನೀಡಲಾಗುವುದು.
ಸಾಲದ ಪರಿಷ್ಕರಣಾ ಶುಲ್ಕವಾಗಿ ಗರಿಷ್ಠ 10,000ರೂ.ಗಳು ಅಥವಾ ಸಾಲದ ಮೊತ್ತದ 0.25 ಪ್ರತಿಶತ ಅಥವಾ ಎರಡರಲ್ಲಿ ಕಡಿಮೆ ಇರುವ ಆಯ್ಕೆಯನ್ನು ಮಾಡಲಾಗುವುದು.
ಗೃಹ ಸಾಲಗಳಿಗೆ ಡಿಜಿಟಲ್ ಅರ್ಜಿ ಸಲ್ಲಿಸಿ, ಆನ್ಲೈನ್‌ನಲ್ಲೇ ಮಂಜೂರಾತಿ ಪಡೆಯಲು ಹೋಮವೈ ಅಪ್ಲಿಕೇಶನ್‌ಗೆ ಚಾಲನೆ ಕೊಟ್ಟಿದೆ ಎಲ್‌ಐಸಿ.