ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) 2024 -25 ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 10,544 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಭರ್ಜರಿ ಲಾಭದಲ್ಲಿರುವ ಎಲ್ಐಸಿ ಆರೋಗ್ಯ ವಿಮೆ ಕ್ಷೇತ್ರ ಪ್ರವೇಶಿಸಲು ನಿರ್ಧಾರ ಕೈಗೊಂಡಿದೆ.
ಖಾಸಗಿ ಆರೋಗ್ಯ ವಿಮೆ ವಲಯಕ್ಕೂ ಹೆಜ್ಜೆ ಇಡಲು ಸಜ್ಜಾಗಿರುವ ಎಲ್ಐಸಿ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಖಾಸಗಿ ಆರೋಗ್ಯ ವಿಮಾ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳುವ ಚಿಂತನೆ ಇದೆ.
ಎಲ್ಐಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧಾರ್ಥ ಮೋಹಂತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ವಿಮೆಗಾಗಿ ಹೊಸ ಕಂಪನಿಯನ್ನು ಸ್ಥಾಪನೆ ಮಾಡುವ ಬದಲು ಈಗ ಉತ್ತಮ ವಹಿವಾಟು ನಡೆಸುತ್ತಿರುವ ಕಂಪನಿಯನ್ನೇ ಸ್ವಾಧೀನಪಡಿಸಿಕೊಳ್ಳುವುದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ. ಇದರಿಂದ ದೇಶದೆಲ್ಲೆಡೆ ಆರೋಗ್ಯ ವಿಮೆ ಮಾರಾಟ ಮಾಡಲು ನಮಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.