alex Certify LIC ಷೇರು ಖರೀದಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LIC ಷೇರು ಖರೀದಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭಾರತದ ಅತಿ ದೊಡ್ಡ ಐಪಿಓ ಎನಿಸಿಕೊಂಡಿರೋ ಎಲ್‌ಐಸಿ ಗ್ರಾಹಕರಿಗೆವಿಶೇಷ ರಿಯಾಯಿತಿ ಘೋಷಿಸಿದೆ. BSEಯಲ್ಲಿ LICಯ ಪ್ರತಿ ಷೇರಿಗೆ ಶೇ.8.62ರಷ್ಟು ಡಿಸ್ಕೌಂಟ್‌ ನೀಡಲಾಗುತ್ತಿದೆ. ಎಲ್‌ಐಸಿ ಐಪಿಓದ ಆರಂಭಿಕ ಬೆಲೆ 949 ರೂಪಾಯಿ ಇತ್ತು. ಈಗ ಗ್ರಾಹಕರಿಗೆ 81 ರೂಪಾಯಿ 80 ಪೈಸೆ ರಿಯಾಯಿತಿ ಸಿಗುತ್ತಿದೆ.

ಬೆಳಗ್ಗೆ 10.25ರವೇಳೆಗೆ ಎಲ್‌ಐಸಿ ಷೇರುಗಳು 904 ರೂಪಾಯಿಗೆ ವಹಿವಾಟು ನಡೆಸಿವೆ. ಎಲ್‌ಐಸಿ ನಿಗದಿಪಡಿಸಿರೋ ಬೆಲೆಗಿಂತಲೂ ಶೇ.4ರಷ್ಟು ಲಾಭದೊಂದಿಗೆ ವಹಿವಾಟಾಗಿರೋದು ವಿಶೇಷ. ಆದ್ರೆ ಎಲ್‌ಐಸಿ ನಿಗದಿ ಮಾಡಿದ್ದ ಆರಂಭಿಕ ಬೆಲೆ 949 ರೂಪಾಯಿಗಿಂತ ಕಡಿಮೆ ಮೊತ್ತಕ್ಕೆ ಷೇರುಗಳು ಬಿಕರಿಯಾಗಿವೆ.  NSEಯಲ್ಲಿ ಮೂಲ ಬೆಲೆಗಿಂತ ಶೇ.8.11ರಷ್ಟು ರಿಯಾಯಿತಿಯಲ್ಲಿ ಷೇರುಗಳು ಬಿಕರಿಯಾಗ್ತಿವೆ.

ಎನ್‌ಎಸ್‌ಸಿ ಮಾಹಿತಿ ಪ್ರಕಾರ ವಹಿವಾಟಿನ ಅಂತ್ಯದಲ್ಲಿ ಷೇರುಗಳ ಬೆಲೆ ಶೇ.3.61ರಷ್ಟು ಕುಸಿತದೊಂದಿಗೆ 914.75 ರೂಪಾಯಿಗೆ ತಲುಪಿತ್ತು. ಇನ್ನೊಂದೆಡೆ ಭಾರತೀಯ ಇಕ್ವಿಟಿ ಮಾನದಂಡಗಳು ಮಂಗಳವಾರ ಸತತ ಎರಡನೇ ಬಾರಿಗೆ ಏರಿಕೆ ಕಂಡಿವೆ. ಹೂಡಿಕೆದಾರರು ಸರ್ಕಾರಿ ಸ್ವಾಮ್ಯದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್‌ನ ಮಾರುಕಟ್ಟೆಯ ಚೊಚ್ಚಲ ಐಪಿಓ ಮೇಲೆ ಗಮನ ಕೇಂದ್ರೀಕರಿಸಿದ್ದರೂ ರೂಪಾಯಿ ಮೌಲ್ಯ ಕುಸಿದಿದೆ. ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮೊತ್ತಕ್ಕೆ ಬಂದು ನಿಂತಿತ್ತು.

ಬಹು-ದಶಕಗಳ ಅಧಿಕ ಹಣದುಬ್ಬರವನ್ನು ಎದುರಿಸಲು ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಆಕ್ರಮಣಕಾರಿ ಬಡ್ಡಿದರ ಹೆಚ್ಚಳದ ಹಾದಿಯಲ್ಲಿರುವುದೇ ಇದಕ್ಕೆ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿನ ತಲ್ಲಣದ ನಡುವೆಯೂ LIC ಯ IPOಗೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. LIC ತನ್ನ ಷೇರುಗಳ ವಿತರಣೆಯ ಬೆಲೆಯನ್ನು 949 ರೂಪಾಯಿಗೆ ನಿಗದಿಪಡಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 20,557 ಕೋಟಿ ರೂಪಾಯಿ ಸೇರ್ತಾ ಇದೆ.

ಎಲ್‌ಐಸಿ ಪಾಲಿಸಿದಾರರು ಮತ್ತು ಚಿಲ್ಲರೆ ಹೂಡಿಕೆದಾರರು ನೀಡಿದ ರಿಯಾಯಿತಿಯನ್ನು ಗಣನೆಗೆ ತೆಗೆದುಕೊಂಡು ಕ್ರಮವಾಗಿ 889 ಮತ್ತು  904 ರೂಪಾಯಿಯ ದರದಲ್ಲಿ ಷೇರುಗಳನ್ನು ಪಡೆದಿದ್ದಾರೆ. ಷೇರುಗಳು ಮಂಗಳವಾರ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಕ್ರಮವಾಗಿ 81.80 ಮತ್ತು 77 ರೂಪಾಯಿ ರಿಯಾಯಿತಿ ಪಡೆದಿವೆ. ಸರ್ಕಾರವು ಐಪಿಒ ಮೂಲಕ 22.13 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...