ಬೆಂಗಳೂರು: ಯುವತಿಗೆ ಪತ್ರ ಬರೆದಿಟ್ಟು ಪರೋಕ್ಷವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪತ್ರ ಬರೆದು ಅಪರಿಚಿತ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ಅಪಾರ್ಟ್ಮೆಂಟ್ ಒಂದರ ಫ್ಲಾಟ್ ನಲ್ಲಿರುವ ಯುವತಿಗೆ ಪತ್ರ ಬರೆದಿದ್ದಾನೆ. ಬಾಗಿಲು ಬಳಿ ಪತ್ರ ಇಟ್ಟು ಕಾಲಿಂಗ್ ಬೆಲ್ ಒತ್ತಿ ಪರಾರಿಯಾಗಿದ್ದಾನೆ. ಬಾಗಿಲು ತೆರೆದ ಯುವತಿಗೆ ಪತ್ರ ಬಿಟ್ಟರೆ ಬೇರೆ ಯಾರೂ ಕಾಣಲಿಲ್ಲ.
ಪತ್ರ ತೆಗೆದು ನೋಡಿದರೆ ಅದರಲ್ಲಿ ಅಪರಿಚಿತ ಆಸಭ್ಯವಾಗಿ ಬರೆದಿದ್ದಾನೆ. ನನಗೆ ಸರ್ವಿಸ್ ಕೊಡ್ತೀರಾ? ಹಾಗಾದರೆ ಬೇಸ್ಮೆಂಟ್ ಗೆ ಬನ್ನಿ ದಿನಕ್ಕೆ 50,000 ರೂ. ಕೊಡುತ್ತೇನೆ ಎಂದು ಅಪರಿಚಿತ ಪತ್ರ ಬರೆದಿದ್ದಾನೆ. ಕೂಡಲೇ ಅಪಾರ್ಟ್ಮೆಂಟ್ ಸಿಬ್ಬಂದಿಯ ಗಮನಕ್ಕೆ ತಂದ ಯುವತಿ ದೂರು ನೀಡಿದ್ದಾರೆ. ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದು, ಪೊಲೀಸರು ಕೋಣನಕುಂಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.