alex Certify ‘ಧೈರ್ಯದಿಂದ ಪ್ರಶ್ನಿಸುತ್ತೇವೆ ಉತ್ತರ ಕೊಡಿ ಸಿಎಂ’ : ರಾಜ್ಯ ಸರ್ಕಾರಕ್ಕೆ ‘ಬಿಜೆಪಿ’ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಧೈರ್ಯದಿಂದ ಪ್ರಶ್ನಿಸುತ್ತೇವೆ ಉತ್ತರ ಕೊಡಿ ಸಿಎಂ’ : ರಾಜ್ಯ ಸರ್ಕಾರಕ್ಕೆ ‘ಬಿಜೆಪಿ’ ಟಾಂಗ್

ಬೆಂಗಳೂರು : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇದುವರೆಗೂ ವಿದ್ಯಾರ್ಥಿ ವೇತನ ಬಂದಿಲ್ಲ, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ ₹11,000 ಕೋಟಿ ಹಾಡುಹಗಲೇ ದುರ್ಬಳಕೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.

ಟ್ವೀಟ್ ಮಾಡಿರುವ ಬಿಜೆಪಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇದುವರೆಗೂ ವಿದ್ಯಾರ್ಥಿ ವೇತನ ಬಂದಿಲ್ಲ, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ ₹11,000 ಕೋಟಿ ಹಾಡುಹಗಲೇ ದುರ್ಬಳಕೆಯಾಗಿದೆ. ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳಿಗೆ ನಿಮ್ಮ ಸರ್ಕಾರದಲ್ಲಿ ನ್ಯಾಯ ದೊರೆಯುವುದಿಲ್ಲವೇ..? ಸಿಎಂ ಸಿದ್ದರಾಮಯ್ಯ ಅವರೇ, ಧೈರ್ಯದಿಂದ ನಾವು ಪ್ರಶ್ನಿಸಿದ್ದೇವೆ. ನಿಮಗೆ ಉತ್ತರ ಕೊಡುವ ತಾಕತ್ತು, ದಮ್ಮು ಇದ್ದರೆ ಉತ್ತರಿಸಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.

ರಾಮನಗರದಲ್ಲಿ ವಕೀಲರ ಮೇಲೆ ತುಘಲಕ್ ಸರ್ಕಾರ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹೋರಾಟ ನಡೆಸಿದ ಬಿಜೆಪಿಗೆ ಕೊನೆಗೂ ಜಯ ಸಿಕ್ಕಿದೆ. ನ್ಯಾಯಾಂಗ ವ್ಯವಸ್ಥೆಯನ್ನೇ ಅವಹೇಳನ ಮಾಡಿದ್ದ ಕಿಡಿಗೇಡಿ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾ ಬೆನ್ನಿಗೆ ನಿಂತಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಬಿಜೆಪಿ ಹೋರಾಟಕ್ಕೆ ಮಣಿದು ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್ಐ ತನ್ವೀರ್ ಹುಸೇನ್ರನ್ನ ಅಮಾನತು ಮಾಡಿದೆ. ಕರ್ನಾಟಕವನ್ನು ತಾಲಿಬಾನ್ ಮಾಡೆಲ್ ಮಾಡುವ ಕನಸು ಹೊತ್ತಿರುವ ಮಜಾವಾದಿ ಸಿದ್ದರಾಮಯ್ಯ ಸರ್ಕಾರದ ಕನಸು ಕನಸಾಗೇ ಇರಲಿದೆ. ಬಿಜೆಪಿ ರಾಜ್ಯದ ಜನರಿಗೆ ಅನ್ಯಾವಾಗುವುದಕ್ಕೇ, ನಾಡ ದ್ರೋಹಿ ಕೆಲಸ ಮಾಡುವುದಕ್ಕೆ ಎಂದಿಗೂ ಬಿಡುವುದಿಲ್ಲ. ಕನ್ನಡಿಗರ ನಾಡಿ ಮಿಡಿತದಂತೆ ಬಿಜೆಪಿ ಹೋರಾಟ ಮಾಡುತ್ತಿದೆ. ಧೈರ್ಯವಾಗಿ ಪ್ರಶ್ನಿಸುವುದು, ಹೋರಾಟ ಮಾಡುವುದು ನಮ್ಮ ಹಕ್ಕು! ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...