ಪ್ರತಿದಿನ ಸೇಬುಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಿದೆ. ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರಿವಿರಿ ಅನ್ನೋ ಗಾದೆಯನ್ನು ಕೇಳಿರಬಹುದು. ಆದ್ರೆ ಅಧ್ಯಯನವೊಂದರ ಪ್ರಕಾರ ಒಂದಲ್ಲ, ದಿನಕ್ಕೆ 2 ಸೇಬು ತಿನ್ನಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಪ್ರಮಾಣ ನಿಧಾನವಾಗುತ್ತದೆ. ಇದರಿಂದ ಹೃದ್ರೋಗದ ಅಪಾಯ ಸಹ ಕಡಿಮೆಯಾಗುತ್ತದೆ.
ಕೇವಲ ಜ್ಯೂಸ್ ಕುಡಿಯುವುದಕ್ಕಿಂತ ಇಡೀ ಹಣ್ಣನ್ನೇ ತಿನ್ನಬೇಕು. ಈ ರೀತಿ ಇಡೀ ಹಣ್ಣು ತಿನ್ನುವವರಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಉತ್ಪತ್ತಿ ಪ್ರಮಾಣ ಶೇ.4ರಷ್ಟು ಕಡಿಮೆ ಇರುತ್ತದೆ. ಸೇಬು ಹಣ್ಣಿನಲ್ಲಿ ಫೈಬರ್ ಹಾಗೂ ಪಾಲಿಫೆನಾಲ್ಸ್ ಇರುವುದರಿಂದ ಅದು ಬ್ಯಾಡ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಸೇಬು ಆರೋಗ್ಯವನ್ನು ಉತ್ತೇಜಿಸುತ್ತವೆ. ನಿಯಮಿತವಾಗಿ ಸೇಬು ತಿಂದರೆ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಸೇಬು ಸೇವನೆಯಿಂದ ತೂಕವನ್ನೂ ಕಳೆದುಕೊಳ್ಳಬಹುದು. ಸೇಬಿನಲ್ಲಿರುವ ಫೈಬರ್, ಪಾಲಿಫಿನಾಲ್ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೇಬು ಕ್ಯಾನ್ಸರ್ ಅನ್ನು ತಡೆಗಟ್ಟಬಲ್ಲದು. ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳೂ ಇದರಲ್ಲಿವೆ. ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುವ ಹಲವು ಅಂಶಗಳನ್ನು ಸೇಬು ಹೊಂದಿದೆ. ಉರಿಯೂತದ ಗುಣಲಕ್ಷಣಗಳು, ಅಸ್ತಮಾದ ವಿರುದ್ಧ ಸಹ ಹೋರಾಡಬಲ್ಲದು. ನಿಮ್ಮ ಶ್ವಾಸಕೋಶವನ್ನು ಇದು ರಕ್ಷಿಸುತ್ತದೆ. ದಿನಕ್ಕೆರಡು ಸೇಬು ಹಣ್ಣಿನ ಜೊತೆಗೆ ಆರೋಗ್ಯಕರ ಆಹಾರ ಸೇವನೆಯೂ ಅತ್ಯವಶ್ಯ.