ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ಭಾರತದ ಪಾಲಿಗೆ ಯಾವಾಗಲೂ ಮಗ್ಗುಲ ಮುಳ್ಳಾಗಿಯೇ ಉಳಿದಿದೆ. ಭಯೋತ್ಪಾದಕರನ್ನು ಗಡಿ ಮೂಲಕ ಭಾರತದೊಳಗೆ ಕಳಿಸುವ ಪಾಕಿಸ್ತಾನ, ವಿಧ್ವಂಸಕ ಕೃತ್ಯ ಎಸಗಲು ಪ್ರಚೋದಿಸುತ್ತಿದೆ. ಇದಕ್ಕೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದ್ದು, ಈಗ ಸದ್ಯಕ್ಕೆ ಬಾಲ ಮುದುರಿಕೊಂಡಿದೆ.
ಇದರ ಜೊತೆಗೆ ಪಾಕಿಸ್ತಾನ ತೀವ್ರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅಲ್ಲಿನ ಜನಸಾಮಾನ್ಯರು ಒಂದೊತ್ತಿನ ಊಟ ಮಾಡಲೂ ಸಹ ಪರದಾಡುವಂತೆ ಆಗಿದೆ. ಇಷ್ಟಾದರೂ ಸಹ ಅಲ್ಲಿನ ಆಡಳಿತ ರೂಢ ನಾಯಕರು ನೆರೆ ರಾಷ್ಟ್ರಗಳೊಂದಿಗೆ ಕ್ಯಾತೆ ತೆಗೆಯುವುದನ್ನು ಬಿಡುತ್ತಿಲ್ಲ.
ತಮ್ಮ ದೇಶದ ದೈನಂದಿನ ಆಡಳಿತದಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ಕಾರಣಕ್ಕಾಗಿಯೇ ನಾವುಗಳು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂಬ ಭಾವನೆ ಬಹುತೇಕ ಅಫ್ಘಾನಿಸ್ತಾನಿಯರಲ್ಲಿದ್ದು, ಭಾರತೀಯ ಯೂಟ್ಯೂಬರ್ ಒಬ್ಬರ ಜೊತೆ ಅಲ್ಲಿನ ಹಿರಿಯ ವ್ಯಕ್ತಿ ಮಾತನಾಡಿದ ವೇಳೆ ಇದು ವ್ಯಕ್ತವಾಗಿದೆ.
ಭಾರತೀಯ ಯೂಟ್ಯೂಬರ್ ಜೊತೆ ಮಾತನಾಡಿದ ಅಫ್ಘಾನಿಸ್ತಾನದ ಹಿರಿಯ ವ್ಯಕ್ತಿ, ಭಾರತೀಯರು ಮತ್ತು ಅಫ್ಘಾನಿಸ್ತಾನಿಯರು ಸಹೋದರರಿದ್ದಂತೆ. ನೀವು ಆ ಕಡೆಯಿಂದ ಬನ್ನಿ, ನಾವು ಈ ಕಡೆಯಿಂದ ಬರುತ್ತೇವೆ. ಒಟ್ಟಾಗಿ ಸೇರಿ ಪಾಕಿಸ್ತಾನವನ್ನು ಬಗ್ಗು ಬಡಿಯೋಣ ಎಂದು ಹೇಳಿದ್ದಾರೆ. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.