alex Certify ಸುತ್ತೋಣ ಬನ್ನಿ ಪ್ರತಿಕ್ಷಣ ಈಶ್ವರನ ಜಲಾಭಿಷೇಕ ನಡೆಸುವ ಶಾಲ್ಮಲೆ ಮಡಿಲಲ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುತ್ತೋಣ ಬನ್ನಿ ಪ್ರತಿಕ್ಷಣ ಈಶ್ವರನ ಜಲಾಭಿಷೇಕ ನಡೆಸುವ ಶಾಲ್ಮಲೆ ಮಡಿಲಲ್ಲಿ

ಶಾಲ್ಮಲೆಯ ತೀರದಲಿ ರಾಜ ಋತುವಿನ ಸಂಜೆ, ಶಶಿಯುದಿಸಿ ಬರೆ ಕಂಡೆ ಸೊಬಗ ಕಂಡೆ… ಎಂದು ಕವಿಗಳು ಶಾಲ್ಮಲಾ ನದಿಯ ಚೆಲುವಿನ ಬಗ್ಗೆ ಹಾಡಿ ಹೊಗಳಿದ್ದಾರೆ.

ಸುತ್ತಲೂ ಹಚ್ಚಹಸಿರಿನ ಕಾಡು, ಹಕ್ಕಿಗಳ ಕಲರವಕ್ಕೆ ಸಾಥ್ ನೀಡುವ ಶಾಲ್ಮಲೆಯ ಜುಳು ಜುಳು ನಿನಾದ.. ಇವೆಲ್ಲ ಕಾಣಸಿಗುವುದು ಸಾವಿರಾರು ಲಿಂಗಗಳನ್ನು ತನ್ನ ಮಡಿಲಲ್ಲಿ ಹೊತ್ತಿರುವ ಸಹಸ್ರ ಲಿಂಗದಲ್ಲಿ.

ಎಲೆಮರೆಯ ಕಾಯಿಯಂತಿರುವ ಈ ಸ್ಥಳ ಇರುವುದು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸೋಂದಾದಲ್ಲಿ. ಶಿರಸಿಯಿಂದ ಸುಮಾರು 17 ಕಿ.ಮೀ. ದೂರದಲ್ಲಿರುವ ಈ ಸಹಸ್ರಲಿಂಗ ಅನೇಕ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಜುಳು ಜುಳು ಹರಿಯುವ ಶಾಲ್ಮಲೆ ತನ್ನ ಒಡಲಲ್ಲಿ ಅನೇಕ ಲಿಂಗಗಳನ್ನು ಇರಿಸಿಕೊಂಡಿದ್ದಾಳೆ. ಈ ಶಾಲ್ಮಲೆಯೇ ಪ್ರತಿ ದಿನ ಪ್ರತಿಕ್ಷಣ ಈಶ್ವರನ ಜಲಾಭಿಷೇಕ ನಡೆಸುತ್ತಾಳೆ.

1678-1718 ರ ಸಮಯದಲ್ಲಿ ಸೋಂದಾ ಕ್ಷೇತ್ರವನ್ನು ಆಳುತ್ತಿದ್ದ ಸದಾಶಿವರಾಯ ಅರಸ ಒಬ್ಬ ಮಹಾ ಶಿವಭಕ್ತನಾಗಿದ್ದ. ಇವನು ಶಾಲ್ಮಲಾ ನದಿಯ ತಟದಲ್ಲಿ ಹಾಗೂ ನದಿಯಲ್ಲಿ ಅನೇಕ ಶಿವಲಿಂಗಗಳನ್ನು ಕೆತ್ತಿಸಿದ. ಹಾಗಾಗಿ ಇಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಶಿವಲಿಂಗವೇ ಗೋಚರಿಸುತ್ತದೆ. ಹಾಗೆಂದು ಇಲ್ಲಿ ಯಾವುದೇ ಗುಡಿ, ಗೋಪುರಗಳಿಲ್ಲ. ಪ್ರವಾಸಿಗರಿಗೆ ತಂಗಲು ಯಾವುದೇ ಸೌಲಭ್ಯ ಕೂಡ ಇಲ್ಲ. ಈ ಕೊರತೆ ಈಗ ಲಿಂಗಗಳನ್ನೂ ಬಾಧಿಸುತ್ತಿರುವುದು ದುರಂತ.

ಕಾಲಕಳೆದಂತೆ ಮಳೆಯ ಹೊಡೆತಕ್ಕೆ ಸಿಕ್ಕು ಸವಕಳಿ ಹೊಂದುತ್ತಿರುವ ಲಿಂಗಗಳು ಬದುಕಿನ ನಶ್ವರತೆಗೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತವೆ. ಕಾಲಗರ್ಭದಲ್ಲಿ ಲೀನವಾಗುತ್ತಿರುವ ಲಿಂಗಗಳಿಗೆ ಸರಿಯಾದ ಸಂರಕ್ಷಣೆಯ ಅನಿವಾರ್ಯತೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...