ನಿಶ್ಚಿತಾರ್ಥದ ದಿನ ಎಂದರೆ ವಧುವಿಗೆ ಎಷ್ಟು ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೋ ಅದೇ ರೀತಿ ಪುರುಷರೂ ಅಂದವಾಗಿ ಕಾಣಿಸಲು ಬಯಸುತ್ತಾರೆ.
ಪುರುಷರೂ ಸುಂದರವಾಗಿ ಕಾಣಿಸಿಕೊಳ್ಳಲು ಹಲವು ಆಯ್ಕೆಗಳಿವೆ. ವರ ಧರಿಸಲು ಆಯ್ಕೆ ಮಾಡುವ ಉಡುಪು ಅವರ ಸೌಂದರ್ಯದ ಆಸಕ್ತಿಯನ್ನು ತಿಳಿಸುತ್ತದೆ.
ಸಾಂಪ್ರದಾಯಿಕ ಉಡುಪುಗಳ ಪೈಕಿ ಶೆರ್ವಾನಿಗೆ ಮೊದಲ ಸ್ಥಾನವಿದೆ. ಇದು ರಾಯಲ್ ಲುಕ್ ನೀಡುವುದರ ಜೊತೆಗೆ ಇಡೀ ಕಾರ್ಯಕ್ರಮದಲ್ಲಿ ವರನನ್ನು ಮಿಂಚುವಂತೆ ಮಾಡುತ್ತದೆ.
ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾಕ್ಲಾಸ್‍ನಿಂದ ಕ್ರಿಸ್ಮಸ್ ಗಿಫ್ಟ್: ಹೃದಯಸ್ಪರ್ಶಿ ವಿಡಿಯೋ ವೈರಲ್
ನಿಶ್ಚಿತಾರ್ಥದಂಥ ಕಾರ್ಯಕ್ರಮಗಳಿಗೆ ಸೂಟ್ ಕೂಡಾ ಅತ್ಯುತ್ತಮ ಆಯ್ಕೆ. ಇದರ ಬಣ್ಣಕ್ಕೆ ಹೊಂದಿಕೊಳ್ಳುವ ಬೆಲ್ಟ್, ಶರ್ಟ್, ಹಾಗೂ ಪ್ಯಾಂಟ್ ಆಯ್ದುಕೊಂಡರೆ ಆ ದಿನದ ಹೀರೋ ನೀವೇ. ಇದು ನಿಮಗೆ ಕ್ಲಾಸಿ ಲುಕ್ ಅನ್ನು ನೀಡುತ್ತದೆ. ಕೋಟ್ ಗೆ ಹೊಂದಿಕೊಳ್ಳುವ ಶೂ ಆಯ್ಕೆ ಮಾಡುವಲ್ಲಿ ಜಾಣತನ ತೋರಿಸಿ. ಕೋಟ್ ಫಿಟ್ಟಿಂಗ್ ಆಗಿರುವುದು ಕೂಡಾ ಅಷ್ಟೇ ಮುಖ್ಯ.
ಶೇರ್ವಾನಿ ಹಾಗೂ ಕುರ್ತಾ ಪೈಜಾಮಗಳೆರಡರ ಲಕ್ಷಣಗಳನ್ನು ಒಳಗೊಂಡಿರುವ ಅಚ್ಕನ್ ನಿಮಗೆ ಮೊಘಲರ ರಾಯಲ್ ಲುಕ್ ನೀಡುತ್ತದೆ. ಗಾಢ ಹಸಿರು, ಕಡು ನೀಲಿ ಮತ್ತು ಮರೂನ್ ಬಣ್ಣಗಳಲ್ಲಿ ಇದು ಲಭ್ಯವಿದೆ.