ಬೇಸಿಗೆಯಲ್ಲಿ ಯಾವ ರೀತಿಯ ಉಡುಪು ಧರಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ. ನಿಮಗೆ ನೆರವಾಗುವ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಹಲವು ವಿಧದ ಪಾನೀಯಗಳನ್ನು ಕುಡಿಯುವುದು ಒಳ್ಳೆಯದೇ. ಆದರೆ ಅದರೊಂದಿಗೆ ಕಾಟನ್ ಉಡುಪುಗಳನ್ನು ಧರಿಸುವುದು ಅಷ್ಟೇ ಮುಖ್ಯ. ಬೇಸಿಗೆಯಲ್ಲಿ ತ್ವಚೆಯನ್ನು ರಕ್ಷಿಸಿಕೊಳ್ಳಲು ನೆರವಾಗುವಂತೆ ತುಂಬು ಕೈಯ ಉಡುಪುಗಳನ್ನೇ ಆಯ್ದುಕೊಳ್ಳಿ.
ಹತ್ತಿಯ ಉಡುಪುಗಳನ್ನು ಧರಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಗಾಳಿಯೂ ಲಭ್ಯವಾಗುತ್ತದೆ. ನಾರಿನಿಂದ ನೇಯ್ದ ಬಟ್ಟೆಗಳನ್ನು ಬಳಸುವುದು ಒಳ್ಳೆಯದು.
ಜರಿ ಬಟ್ಟೆಗಳನ್ನು ದೂರವಿಡಿ. ಬಿಸಿಲಿಗೆ ಹೋದಷ್ಟು ಬೆವರುವುದು ಹೆಚ್ಚು. ಹಾಗಾಗಿ ಕರ್ಚೀಫ್ ಒಂದನ್ನು ಸದಾ ನಿಮ್ಮ ಜೊತೆ ಇಟ್ಟುಕೊಳ್ಳಿ.
ಬೇಸಿಗೆಯಲ್ಲಿ ಗಾಢಬಣ್ಣದ ಉಡುಪುಗಳನ್ನು ಧರಿಸುವುದು ಬೇಡ. ಇವು ಕಣ್ಣಿಗೂ ದೇಹಕ್ಕೂ ಹಿತಕಾರಿಯಲ್ಲ. ಲೈಟ್ ಬಣ್ಣಗಳನ್ನೇ ಆಯ್ಕೆ ಮಾಡುವುದು ಒಳ್ಳೆಯದು. ಕಾಲರ್ ನೆಕ್ ಉಡುಪುಗಳನ್ನು ಆದಷ್ಟು ದೂರವಿಡಿ.