alex Certify ಚಿಂತೆ ಬಿಟ್ಟು ಸದಾ ಖುಷಿಯಾಗಿರಲು ಇರಲಿ ಈ ಹವ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಂತೆ ಬಿಟ್ಟು ಸದಾ ಖುಷಿಯಾಗಿರಲು ಇರಲಿ ಈ ಹವ್ಯಾಸ

ನೀವು ಕೆಲವು ವ್ಯಕ್ತಿಗಳನ್ನು ಗಮನಿಸಿರಬಹುದು. ಅವರು ಸದಾ ಒಂದಿಲ್ಲೊಂದು ಚಿಂತೆಯಲ್ಲಿ ಮುಳುಗಿರುತ್ತಾರೆ. ಮುಖ್ಯವಾಗಿ ಎಲ್ಲ ಕೆಲಸಗಳನ್ನು ಒತ್ತಡದಿಂದ ನಿಭಾಯಿಸುವುದೇ ಇದಕ್ಕೆ ಕಾರಣ. ಹಾಗಾದರೆ ಇದನ್ನು ಹೇಗೆ ನಿಭಾಯಿಸಬಹುದು…?

ಸರಿಯಾದ ಸಮಯವನ್ನು ಪಾಲಿಸಿ. ಇಷ್ಟು ಸಮಯದಲ್ಲಿ ಇಷ್ಟು ಕೆಲಸ ಮುಗಿಯಲೇ ಬೇಕು ಎಂಬ ಟೈಮ್ ಟೇಬಲ್ ಹಾಕಿಕೊಳ್ಳಿ. ಶಾಂತ ಚಿತ್ತರಾಗಿ ನಿಮ್ಮ ಕೆಲಸ ಮುಗಿಸಿ.

ಯಾರೋ ಏನೋ ಹೇಳಿದರು ಎಂಬ ಕೊರಗು ಬೇಡ. ಎಲ್ಲವನ್ನೂ ಜೀರ್ಣಿಸಿಕೊಳ್ಳಲು ಕಲಿಯಿರಿ. ಕೀಳರಿಮೆ ಬಿಟ್ಟುಬಿಡಿ. ನಿಮ್ಮ ಕೈಲಾಗದ್ದು ಯಾವುದೂ ಇಲ್ಲ. ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಡಿ.

ಸಿಟ್ಟು, ಆಕ್ರೋಶ, ಸೇಡಿನ ಭಾವದಿಂದ ಯಾವ ಪ್ರಯೋಜನವೂ ಇಲ್ಲ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದಷ್ಟೇ. ನೋವನ್ನು ಆಪ್ತರ ಬಳಿ ಹೇಳಿಕೊಂಡು ಹಗುರಾಗಿ. ಮೊಬೈಲ್ ಹೊರತಾದ ಯಾವುದಾದರೊಂದು ಹವ್ಯಾಸವನ್ನು ರೂಢಿಸಿಕೊಳ್ಳಿ.

ನಿಮ್ಮನ್ನು ನೀವೇ ತಿಳಿದುಕೊಳ್ಳಿ. ನಿಮ್ಮ ತಾಕತ್ತಿನ ಬಗ್ಗೆ ತಿಳಿದಿರುವಂತೆ ನಿಮ್ಮ ನೆಗೆಟಿವ್ ಸೈಡ್ ಬಗ್ಗೆಯೂ ಅರಿವು ಮೂಡಿಸಿಕೊಳ್ಳಿ. ಆಗದ ವಸ್ತುಗಳಿಂದ, ವ್ಯಕ್ತಿಗಳಿಂದ ದೂರವಿರಿ. ಸನ್ನಿವೇಶವನ್ನು ಎದುರಿಸಿ. ಸೋಲು, ಗೆಲುವು ನಾಣ್ಯದ ಎರಡು ಮುಖಗಳು ಎಂದಾದ ಮೇಲೆ, ಹೆಚ್ಚು ಹೆಚ್ಚು ದುಃಖ ಪಡುವುದು ಅರ್ಥಹೀನ ಎಂಬುದನ್ನು ಅರಿತುಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...