ನಾಡಿನಾದ್ಯಂತ ದೀಪಾವಳಿ ಆಚರಿಸಲು ಸಿದ್ದತೆ ನಡೆಯುತ್ತಿದೆ ಧನ, ಸಮೃದ್ಧಿಗಾಗಿ ನಾಡಿನೆಲ್ಲೆಡೆ ತಾಯಿ ಮಹಾಲಕ್ಷ್ಮಿಯ ಪೂಜೆ ಮಾಡಲಾಗುತ್ತದೆ. ವಿಧಿ- ವಿಧಾನದ ಮೂಲಕ ಪೂಜೆ ಮಾಡಿದ ಬಳಿಕ ಪ್ರಸಾದ ಸೇವನೆ ಹಾಗೂ ಪ್ರಸಾದ ಸಿದ್ಧಪಡಿಸುವ ವೇಳೆ ಕೆಲವೊಂದು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಊಟವನ್ನು ಸಿದ್ಧಪಡಿಸಬೇಕು. ಆಹಾರ ತಯಾರಿಸುವ ವೇಳೆ ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳಿ. ಮನೆಯವರ ಆರೋಗ್ಯದ ಬಗ್ಗೆ ಯೋಚಿಸಿ, ಇಲ್ಲ ತಾಯಿಯ ಜಪ ಮಾಡಿ. ಆದ್ರೆ ಬೇರೆಯವರ ನಿಂದನೆ ಮಾಡ್ತಾ ಆಹಾರ ಸಿದ್ಧಪಡಿಸಬೇಡಿ. ಜೊತೆಗೆ ಕೋಪ ಮಾಡಿಕೊಂಡು ಆಹಾರ ತಯಾರಿಸಬೇಡಿ.
ಇನ್ನು ತಯಾರಿಸಿದ ಸಿಹಿ ತಿಂಡಿಗಳನ್ನು ಮೊದಲು ತಾಯಿಗೆ ಅರ್ಪಿಸಿ. ನಂತ್ರ ಕುಟುಂಬಸ್ಥರಿಗೆ ಬಡಿಸಿ. ಆ ನಂತ್ರ ಮನೆಗೆ ಬಂದ ಸಂಬಂಧಿಕರಿಗೆ ನೀಡಿ. ಹೀಗೆ ಮಾಡುವುದರಿಂದ ತಾಯಿ ಕೈಬಿಚ್ಚಿ ಖಜಾನೆ ತುಂಬಿಸ್ತಾಳೆಂಬ ನಂಬಿಕೆಯಿದೆ.
ಮಹಾಲಕ್ಷ್ಮಿಗೆ ಪ್ರಿಯವಾದ ಪದಾರ್ಥಗಳನ್ನು ನೈವೇದ್ಯ ಮಾಡಿ ದೇವಿ ಕೃಪೆಗೆ ಪಾತ್ರರಾಗಿ. ಜೇನು ತುಪ್ಪ, ತೆಂಗಿನಕಾಯಿ ಅಥವಾ ತೆಂಗಿನ ಕಾಯಿಯಿಂದ ಮಾಡಿದ ಸಿಹಿ ತಿಂಡಿ, ಹಾಲಿನಿಂದ ಮಾಡಿದ ಸಿಹಿತಿಂಡಿ, ಅಕ್ಕಿ, ಖೀರು, ಮೊಸರು, ಶೃಂಗಾರಗೊಂಡ ನೀರು, ಸಕ್ಕರೆ ಗೊಂಬೆಯನ್ನು ತಾಯಿಗೆ ನೈವೇದ್ಯ ಮಾಡಿ.