ಹಿಂದೂ ಧರ್ಮದಲ್ಲಿ ದೀಪಕ್ಕೆ ಬಹಳ ಮಹತ್ವವಿದೆ. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಮನೆಯಲ್ಲಿ ದೀಪ ಹಚ್ಚುವವರಿದ್ದಾರೆ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ತುಳಸಿ ಗಿಡದ ಬಳಿ ಹಾಗೂ ಮನೆಯ ಹೊಸ್ತಿಲ ಬಳಿ ಕೂಡ ದೀಪ ಹಚ್ಚುವ ಪದ್ಧತಿಯಿದೆ. ದೀಪ ಸಮೃದ್ಧಿಯ ಸಂಕೇತ. ದೀಪ ಹಚ್ಚುವದ್ರಿಂದ ಭಗವಂತ ಪ್ರಸನ್ನನಾಗ್ತಾನೆ ಎಂದು ನಂಬಲಾಗಿದೆ. ಯಾವುದೇ ಶುಭ ಕಾರ್ಯವನ್ನು ದೀಪ ಬೆಳಗುವ ಮೂಲಕ ಮಾಡಲಾಗುತ್ತದೆ. ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುವ ಮುನ್ನ ದೀಪ ಬೆಳಗಲಾಗುತ್ತದೆ. ದೀಪ ಬೆಳಗುವ ಮೊದಲು ಕೆಲವೊಂದು ತಪ್ಪುಗಳನ್ನು ಮಾಡಲಾಗುತ್ತದೆ.
ದೀಪ ಹಚ್ಚುವ ಸಂದರ್ಭದಲ್ಲಿ ತಲೆ ಮೇಲೆ ಬಟ್ಟೆಯನ್ನು ಹಾಕಿಕೊಳ್ಳಬೇಕು. ಪುರುಷ ಇರಲಿ ಇಲ್ಲ ಮಹಿಳೆ. ತಲೆ ಮುಚ್ಚಿರಬೇಕು. ಬಹುತೇಕರು ತಲೆ ಮೇಲೆ ಯಾವುದೇ ವಸ್ತ್ರ ಹಾಕದೆ ದೀಪ ಹಚ್ಚುತ್ತಾರೆ.
ದೀಪವನ್ನು ಖಾಲಿ ನೆಲದ ಮೇಲೆ ಎಂದೂ ಇಡಬೇಡಿ. ಅಕ್ಕಿ, ಹೂ ಅಥವಾ 7 ಬಗೆಯ ಧಾನ್ಯವನ್ನು ಕೆಳಗೆ ಹಾಕಿ, ಅದ್ರ ಮೇಲೆ ದೀಪ ಇಡಬೇಕು.
ಇಷ್ಟಾರ್ಥ ಸಿದ್ಧಿಗಾಗಿ ದೀಪ ಹಚ್ಚುವವರಾದ್ರೆ ಆಕಳ ಶುದ್ಧ ತುಪ್ಪದಲ್ಲಿ ದೀಪವನ್ನು ಹಚ್ಚಬೇಕು.
ಶತ್ರುಗಳ ನಾಶ ಮಾಡಲು ಬಯಸಿದ್ದರೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ. ಅದಕ್ಕೆ ಎರಡು ಲವಂಗವನ್ನು ಹಾಕಿ. ನಂತ್ರ ಹನುಮಂತನಿಗೆ ದೀಪವನ್ನು ಅರ್ಪಿಸಿ. ದೀಪ ಹಚ್ಚುವ ವೇಳೆ
ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದ:||
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ ||
ದೀಪಜ್ಯೋತಿ: ಪರಬ್ರಹ್ಮ ದೀಪಜ್ಯೋತಿರ್ಜನಾರ್ಧನ: ||
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ||
ಈ ಮಂತ್ರವನ್ನು ಜಪಿಸಿ.