ಅಕ್ಕಿಯನ್ನು ಹೆಚ್ಚೆಂದರೆ ಎರಡು ಬಾರಿ ನೀರಿನಲ್ಲಿ ತೊಳೆದು ಅನ್ನ ತಯಾರಿಸುತ್ತೇವೆ. ಆದರೆ ಅಕ್ಕಿಯನ್ನು ಮೂರರಿಂದ ನಾಲ್ಕು ಬಾರಿಯಾದರೂ ತೊಳೆಯಬೇಕು. ಇದರಿಂದ ಅಕ್ಕಿಯಲ್ಲಿರುವ ಸ್ಟಾರ್ಚ್ ಹೋಗುತ್ತದೆ. ಇಲ್ಲದಿದ್ದರೆ ಅನ್ನ ಪರಸ್ಪರ ಅಂಟಿಕೊಳ್ಳುತ್ತದೆ.
ಹಾಲಿನ ಪ್ಯಾಕೆಟ್
ಮೊಸರು, ಹಾಲು ಮುಂತಾದ ದ್ರವರೂಪದ ಡೈರಿ ಉತ್ಪನ್ನಗಳ ಪ್ಯಾಕೆಟ್ ಗಳನ್ನು ತೆರೆಯುವ ಮುನ್ನ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಏಕೆಂದರೆ ಅನೇಕರು ಪ್ಯಾಕೆಟ್ ಗಳನ್ನು ಮುಟ್ಟಿರುತ್ತಾರೆ. ಇದರಿಂದ ಅವುಗಳಲ್ಲಿ ಬ್ಯಾಕ್ಟೀರಿಯ ಸೇರಿರುವ ಸಾಧ್ಯತೆ ಇರುತ್ತದೆ.
ಕ್ಯಾಬೇಜ್
ಬ್ರೊಕೋಲಿ, ಹೂಕೋಸು, ಕ್ಯಾಬೇಜ್ ನಂತಹ ತರಕಾರಿಗಳಲ್ಲಿ ಹುಳಗಳು ಇರುತ್ತವೆ. ಆದ್ದರಿಂದ ಇದನ್ನು ಚೆನ್ನಾಗಿ ತೊಳೆಯುವುದು ಅತಿ ಅಗತ್ಯ. ಕ್ಯಾಬೇಜ್ ನ ಮೇಲಿನ ಎರಡು ಪದರಗಳನ್ನು ತೆಗೆದ ನಂತರ ಉಳಿಯುವ ಭಾಗವನ್ನು ಸಣ್ಣಗೆ ಹೆಚ್ಚಿ, ಸ್ವಲ್ಪ ವಿನೆಗರ್ ಬೆರೆಸಿದ ನೀರಿನಲ್ಲಿ ನೆನೆಸಿಟ್ಟು ಆಮೇಲೆ ಚೆನ್ನಾಗಿ ತೊಳೆದು ಬಳಸಬೇಕು.
ಸೇಬು
ಸಿಂಥಟಿಕ್ ರಾಸಾಯನಿಕ ಮತ್ತು ಕೀಟನಾಶಕಗಳಿಂದ ತುಂಬಿರುವ ಮುಂತಾದ ಹಣ್ಣುಗಳನ್ನು ಬೇಕಿಂಗ್ ಸೋಡಾ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ನೆನೆಸಿಟ್ಟರೆ ಅದರ ರಾಸಾಯನಿಕಗಳು ಹೋಗುತ್ತವೆ.
ಲೆಟ್ಯೂಸ್
ಮರಳು ಅಥವಾ ಮಣ್ಣು ತುಂಬಿರುವ ಲೆಟ್ಯೂಸ್ ಎಲೆಗಳನ್ನು ತಣ್ಣೀರಿನಲ್ಲಿ ಸ್ವಲ್ಪ ನಿಮಿಷ ನೆನೆಸಿಟ್ಟು ನಂತರ ತೊಳೆದು ಒಣಗಿಸಿ ಬಳಸಬೇಕು.
ಫ್ರೋಜನ್ ಫ್ರೂಟ್ಸ್
ಕೆಲವರು ಫ್ರೋಜನ್ ಫ್ರೂಟ್ಸ್ ಮತ್ತು ತರಕಾರಿಗಳನ್ನು ತೊಳೆಯದೆ ಅಡುಗೆಗೆ ಬಳಸುತ್ತಾರೆ. ಇದನ್ನು ಚೆನ್ನಾಗಿ ತೊಳೆದರೆ ಅದರಲ್ಲಿರುವ ಕೊಳೆ ಮತ್ತು ಬ್ಯಾಕ್ಟೀರಿಯಾ ಹೋಗುತ್ತದೆ.