ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಕೆಲ ಸಮಸ್ಯೆಗಳು ಮಳೆಗಾಲದಲ್ಲಿ ಕಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಚರ್ಮ ಹಾಗೂ ಕೂದಲಿಗೆ ವಿಶೇಷ ಆರೈಕೆ ಬೇಕು. ವಾರದಲ್ಲಿ ಎರಡರಿಂದ ಮೂರು ದಿನ ಕೂದಲು ಸ್ವಚ್ಛಗೊಳಿಸಬೇಕು. ಹಾಗೆ ಮುಖವನ್ನು ಸ್ವಚ್ಛವಾಗಿ ತೊಳೆದು ಒಣಗಿದ ಬಟ್ಟೆಯಲ್ಲಿ ಒರೆಸಿಕೊಳ್ಳಬೇಕು.
ಮಳೆಯಿಂದ ನಿಮ್ಮ ಬಟ್ಟೆ ಒದ್ದೆಯಾಗಿದ್ದರೆ ತುಂಬಾ ಸಮಯದವರೆಗೆ ಒದ್ದೆ ಬಟ್ಟೆಯಲ್ಲಿರಬೇಡಿ. ಸ್ವಚ್ಛ ನೀರಿನಲ್ಲಿ ಸ್ನಾನ ಮಾಡಿ. ಒಣಗಿದ ಬಟ್ಟೆಯನ್ನು ಆದಷ್ಟು ಬೇಗ ಧರಿಸಿ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಬಿಸಿಬಿಸಿ ಕರಿದ ತಿಂಡಿ ತಿನ್ನಲು ಮನಸ್ಸು ಬಯಸುತ್ತದೆ. ಎಣ್ಣೆಯುಕ್ತ ತಿಂಡಿಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಎಣ್ಣೆಯುಕ್ತ ತಿಂಡಿಯಿಂದ ದೂರವಿರುವುದು ಒಳ್ಳೆಯದು.
ಚರ್ಮದ ತೇವಾಂಶ ಕಾಪಾಡಿಕೊಂಡು ನೈಸರ್ಗಿಕ ಹೊಳಪು ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ.
ಮಳೆಗಾಲದಲ್ಲಿ ಕೂದಲು ಒಣಗಿ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯ ಸಮಸ್ಯೆ. ಹಾಗಾಗಿ ಎಂಟಿ ಡ್ಯಾಂಡ್ರಫ್ ಶ್ಯಾಂಪೂ ಬಳಸಿ.
ತಲೆ ಸ್ನಾನ ಮಾಡಲು ಒಂದು ಗಂಟೆ ಮೊದಲು ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳಿ.
ಒದ್ದೆಯಾಗಿರುವ ಕೂದಲನ್ನು ಕಟ್ಟಬೇಡಿ. ಹೇರ್ ಡ್ರೈಯರ್ ಬಳಕೆಯನ್ನು ಮಳೆಗಾಲದಲ್ಲಿ ಕಡಿಮೆ ಮಾಡಿ.