ನಮಗೆ ತೀರಾ ಆಪ್ತರಾದ ಗೆಳೆಯರು, ಗೆಳತಿಯರು ಇದ್ದಾಗ ಅವರೊಂದಿಗೆ ಎಲ್ಲವನೂ ಹೇಳಿಕೊಳ್ಳುತ್ತೇವೆ. ತೀರಾ ಖಾಸಗಿಯಾದ ವಿಷಯವನ್ನು ಕೂಡ ಕೆಲವೊಮ್ಮೆ ಹೇಳಿಕೊಂಡು ಬಿಡುತ್ತೇವೆ. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಎಷ್ಟೇ ಆಪ್ತ ಗೆಳೆಯ, ಗೆಳತಿಯರಾದರೂ ಅವರೊಂದಿಗೆ ನಿಮ್ಮ ಜೀವನದ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಬೇಡಿ. ಎಲ್ಲರ ಮನಸ್ಥಿತಿ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ನೀವು ನಂಬಿದವರಿಂದಲೇ ಮೋಸ ಆಗುವುದು ಜಾಸ್ತಿ.
ಇನ್ನು ನಿಮ್ಮ ಹೆಂಡತಿ ಅಥವಾ ಗಂಡನ ವಿಷಯವನ್ನು ಯಾವುದೇ ಕಾರಣಕ್ಕೂ ಮೂರನೇಯವರ ಬಳಿ ಮಾತನಾಡಬೇಡಿ. ಇದರಿಂದ ನೀವೇ ನಗೆಪಾಟಲಿಗೆ ಈಡಾಗುತ್ತೀರಿ.
ನಿಮ್ಮ ಖಾಸಗಿ ಬದುಕು, ಕೆಲವೊಂದು ಫೋಟೊಗಳನ್ನು ಯಾವುದೇ ಕಾರಣಕ್ಕೂ ಆಪ್ತರಿಗೆ ತೋರಿಸಬೇಡಿ.
ಕೆಲವೊಂದನ್ನು ಗುಟ್ಟಾಗಿ ಇಟ್ಟಷ್ಟು ನಿಮಗೂ ಒಳ್ಳೆಯದು. ನಿಮ್ಮ ಹಣಕಾಸು, ಸಂಬಂಧ, ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನು ಎಲ್ಲರೊಂದಿಗೂ ಹಂಚಿಕೊಂಡು ಬಿಟ್ಟರೆ ಅದರಿಂದ ಕೆಲವರು ಲಾಭ ತೆಗೆದುಕೊಳ್ಳುವುದಕ್ಕೆ ನೋಡುತ್ತಾರೆ.
ಇನ್ನು ಕೆಲವರು ಹಿಂದಿನಿಂದ ಆಡಿಕೊಳ್ಳುತ್ತಾರೆ. ಹಾಗಾಗಿ ಆದಷ್ಟು ನಿಮ್ಮ ಖಾಸಗಿ ಬದುಕಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳಬೇಡಿ.
ಹಾಗಂತ ಎಲ್ಲರ ಮೇಲೂ ಅನುಮಾನ ಸಲ್ಲದು. ತೀರಾ ತೊಂದರೆ ಅನುಭವಿಸುತ್ತಿರುವಾಗ ಹೇಳಿಕೊಳ್ಳಿ. ಆದರೆ ಎದುರುಗಿರುವ ವ್ಯಕ್ತಿ ನಿಮ್ಮ ನಂಬಿಕೆಗೆ ಅರ್ಹನಾ…? ಎಂಬುದನ್ನು ಮೊದಲು ಯೋಚಿಸಿ.