ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿರೋ ಲೈಂಗಿಕ ದೌರ್ಜನ್ಯವನ್ನು ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.
ಈ ಬಗ್ಗೆ ಪೋಸ್ಟ್ ಹಂಚಿಕೊಂಡ ನಟ ಚೇತನ್ ಅಹಿಂಸಾ ‘ಕೆ. ಹೇಮಾ ಸಮಿತಿಯ 235 ಪುಟಗಳ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಅತಿರೇಕದ ಲೈಂಗಿಕ ಶೋಷಣೆ ಮತ್ತು ‘ಕಾಸ್ಟಿಂಗ್ ಕೌಚ್’ ಒಂದು ಸ್ಥೂಲ ವಾಸ್ತವವಾಗಿದೆ ಎಂದು ಬಹಿರಂಗಪಡಿಸುತ್ತದೆ’.
‘ನಮ್ಮ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಮತ್ತು ಮೀಟೂ ಆಕ್ಟಿವಿಸಂ (2018) ಕನ್ನಡ ಚಲನಚಿತ್ರೋದ್ಯಮವು ಇದಕ್ಕಿಂತ ಭಿನ್ನವಾಗಿಲ್ಲ ಎಂಬುದನ್ನು ತೋರಿಸುತ್ತದೆ.ಕನ್ನಡ ಚಲನಚಿತ್ರ ರಂಗದಲ್ಲಿರೋ ಲೈಂಗಿಕ ದೌರ್ಜನ್ಯವನ್ನು ನಿರ್ಮೂಲನೆ ಮಾಡಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಲಿ’ ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.