ಪ್ರತಿಯೊಂದು ದಂಪತಿ ತಮ್ಮ ಹನಿಮೂನ್ ಸುಂದರವಾಗಿರಲೆಂದು ಬಯಸ್ತಾರೆ. ಹನಿಮೂನ್ ಬಗ್ಗೆ ಮದುವೆಗೂ ಮುನ್ನವೇ ಕನಸು ಕಾಣುವ ಜೋಡಿ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸುತ್ತಾರೆ.
ಹನಿಮೂನ್ ವೇಳೆ ಪರಸ್ಪರ ಸರ್ಪ್ರೈಸ್ ನೀಡುವ ಜೊತೆಗೆ ಸಾಕಷ್ಟು ಸುಂದರ ಕ್ಷಣಗಳನ್ನು ಕಳೆಯುತ್ತಾರೆ. ಹನಿಮೂನ್ ಮುಗಿಸಿ ಮನೆಗೆ ಬರ್ತಿದ್ದಂತೆ ಕೆಲಸದಲ್ಲಿ ಮುಳುಗಿ ಹೋಗ್ತಾರೆ. ಹನಿಮೂನ್ ದಿನಗಳು ಮರೆತು ನಿಧಾನವಾಗಿ ದಂಪತಿ ಮಧ್ಯೆ ರೋಮ್ಯಾನ್ಸ್ ಕಡಿಮೆಯಾಗ್ತಾ ಬರುತ್ತೆ. ನಿಮ್ಮ ಜೀವನದಲ್ಲೂ ಇದೇ ಆಗಿದ್ದರೆ ಈ ಟಿಪ್ಸ್ ಅನುಸರಿಸಿ ಹನಿಮೂನ್ ನಂತ್ರವೂ ರೋಮ್ಯಾನ್ಸ್ ಜೀವಂತವಾಗಿರುವಂತೆ ನೋಡಿಕೊಳ್ಳಿ.
ಸರ್ಪ್ರೈಸಸ್ ಎಲ್ಲರಿಗೂ ಇಷ್ಟ. ಸಂಗಾತಿಗೆ ಯಾವುದು ಇಷ್ಟ ಯಾವುದು ಕಷ್ಟ ಎಂಬುದು ನಿಮಗೆ ಗೊತ್ತಿರುತ್ತದೆ. ತಿಂಗಳಿಗೊಮ್ಮೆಯಾದ್ರೂ ಸಂಗಾತಿಗೆ ಇಷ್ಟವಾಗುವ ಸರ್ಪ್ರೈಸ್ ನೀಡಿ ಅವರನ್ನು ಖುಷಿಗೊಳಿಸಿ.
ನಮ್ಮ ನಮ್ಮ ಕೆಲಸವನ್ನು ನಾವು ಮಾಡಿಕೊಳ್ಳೋದು ಕಾಮನ್. ಆದ್ರೆ ವಾರಕ್ಕೊಮ್ಮೆ ಕೆಲಸವನ್ನು ಅದಲು ಬದಲು ಮಾಡಿ. ಪತಿ ಮಾಡುವ ಕೆಲಸವನ್ನು ಪತ್ನಿ, ಪತ್ನಿ ಮಾಡುವ ಕೆಲಸವನ್ನು ಪತಿ ಮಾಡಿದ್ರೆ ಇಬ್ಬರ ಕೆಲಸದ ಒತ್ತಡ ಪರಸ್ಪರ ಅರ್ಥವಾಗುತ್ತದೆ. ಇಬ್ಬರ ನಡುವೆ ಹೊಂದಾಣಿಗೆ ಮೂಡುತ್ತದೆ. ಒಬ್ಬರ ಕೆಲಸದಲ್ಲಿ ಇನ್ನೊಬ್ಬರು ಭಾಗಿಯಾದಾಗ ರೋಮ್ಯಾನ್ಸ್ ಗೂ ಸಮಯ ಸಿಗುತ್ತದೆ.
ಪ್ರತಿ ದಿನ, ಪ್ರತಿ ಗಂಟೆ ಒಟ್ಟಿಗೆ ಇದ್ದರೆ ಪರಸ್ಪರ ಬೋರ್ ಆಗಲು ಶುರುವಾಗುತ್ತದೆ. ಹಾಗಾಗಿ ಸಮಯ ಸಿಕ್ಕಾಗ ಒಂಟಿಯಾಗಿ ಪ್ರವಾಸಕ್ಕೆ ಹೋಗಿ ಬನ್ನಿ. ಸಂಗಾತಿಯಿಂದ ಮೂರ್ನಾಲ್ಕು ದಿನ ದೂರವಿರಿ. ನಂತ್ರ ಮತ್ತೆ ಸಿಕ್ಕಾಗ ಇಬ್ಬರ ನಡುವೆ ಹೊಸ ಪ್ರೀತಿ ಚಿಗುರುತ್ತದೆ.
ಒತ್ತಡದ ಜೀವನದ ಮಧ್ಯೆ ಸಮಯ ಹೊಂದಿಸಿಕೊಂಡು ಡೇಟಿಂಗ್ ಗೆ ಹೋಗಿ ಬನ್ನಿ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ.
ಮನೆಯಿಂದ ಹೊರ ಹೋಗುವುದು ಆರೋಗ್ಯಕ್ಕೊಂದೇ ಅಲ್ಲ ಭಾವನೆಗಳ ಮೇಲೂ ಪರಿಣಾಮ ಬೀರುತ್ತದೆ. ವಾರಕ್ಕೊಮ್ಮೆ ಪ್ರವಾಸಕ್ಕೆ ಹೋಗಿ. ಇದು ನಿಮ್ಮ ಮಧುಚಂದ್ರದ ದಿನಗಳನ್ನು ನೆನಪು ಮಾಡಲು ನೆರವಾಗುತ್ತದೆ.