alex Certify ‘CBSE’ 9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್ & ಸಂಬಂಧಗಳ ಬಗ್ಗೆ ಪಾಠ : ಪೋಸ್ಟ್ ವೈರಲ್ |Viral Post | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘CBSE’ 9ನೇ ತರಗತಿ ಪಠ್ಯ ಪುಸ್ತಕದಲ್ಲಿ ಡೇಟಿಂಗ್ & ಸಂಬಂಧಗಳ ಬಗ್ಗೆ ಪಾಠ : ಪೋಸ್ಟ್ ವೈರಲ್ |Viral Post

CBSE 9 ನೇ ತರಗತಿಯ ಪಠ್ಯಪುಸ್ತಕದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಮಾಡಿದ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

‘ಡೇಟಿಂಗ್ ಮತ್ತು ಸಂಬಂಧಗಳ ಅಧ್ಯಾಯವನ್ನು ಹೊಂದಿರುವ ಪಠ್ಯಪುಸ್ತಕವು ಸಾಂಪ್ರದಾಯಿಕ ಶೈಕ್ಷಣಿಕ ವಿಷಯಗಳಿಂದ ದೂರವಿರುವ ಪಾಠಗಳನ್ನು ಒಳಗೊಂಡಿದೆ. ಸಿಬಿಎಸ್ಇ ಕೈಗೊಂಡ ಪ್ರಗತಿಪರ ಹೆಜ್ಜೆಯಲ್ಲಿ, 9 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ಪರಿಚಯಿಸಿದೆ. ಈ ಅಧ್ಯಾಯಗಳು ಸಂಪೂರ್ಣವಾಗಿ ಡೇಟಿಂಗ್ ಮತ್ತು ಸಂಬಂಧಗಳ ಸೂಕ್ಷ್ಮತೆಗಳನ್ನು ಚರ್ಚಿಸಲು ಮೀಸಲಾಗಿವೆ .

ಕ್ರಶ್ ಮತ್ತು ವಿಶೇಷ ಸ್ನೇಹದಂತಹ ವಿಷಯಗಳನ್ನು ಸರಳ ಕಥೆಗಳು ಮತ್ತು ಉದಾಹರಣೆಗಳ ಮೂಲಕ ಪಠ್ಯದಲ್ಲಿ ವಿವರಿಸಲಾಗಿದೆ. ನೆಟ್ಟಿಗರೊಬ್ಬರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಪೋಸ್ಟ್ ಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ. ಕೆಲವರು ಶಾಕ್ ಆದರೆ , ಇನ್ನೂ ಕೆಲವರು ಆಧುನಿಕ ಜಗತ್ತಿಗೆ ಬೇಕಾಗುವ ಪ್ರಮುಖ ಅಧ್ಯಾಯಗಳನ್ನು ಸೇರಿಸಿದ್ದಕ್ಕಾಗಿ ಸಿಬಿಎಸ್ಇಯನ್ನು ಶ್ಲಾಘಿಸಿದರು.ಶಾಲಾ ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಸೇರಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳಾಗಿದೆ. ಮತ್ತು ಕುತೂಹಲವನ್ನು ಹುಟ್ಟುಹಾಕಿದೆ.  ಕೆಲವರು ‘ಬ್ರೇಕಪ್ ಆದರೆ ಏನು ಮಾಡಬೇಕು, ಅದನ್ನು ಮಕ್ಕಳಿಗೆ ಹೇಳಿಕೊಡಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...