ಭಾರತ, ತನ್ನದೇ ಆಗಿರೋ ವಿಶೇಷತೆಗಳನ್ನ ಒಳಗೊಂಡಿರುವ ದೇಶ. ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಉಡುಗೆ-ತೊಡುಗೆ ಅಷ್ಟೆ ಅಲ್ಲ ಆಹಾರ ಪದ್ಧತಿಯಲ್ಲೂ ವಿಭಿನ್ನತೆಯನ್ನ ಕಾಣಬಹುದು. ಐತಿಹಾಸಿಕ ಸ್ಮಾರಕ ಸೇರಿದಂತೆ ಹತ್ತು ಹಲವಾರು ವಿಶೇಷತೆಗಳನ್ನ ಹೊಂದಿರೋ ಭಾರತದ ದರ್ಶನ ಪಡೆಯಲು ವಿದೇಶಿ ಪ್ರವಾಸಿಗರು, ಬರುವುದು ಸಾಮಾನ್ಯ. ಆದರೆ ಕೆಲವರು ವಿದೇಶಿಯರು ಅಂದಾಕ್ಷಣ ಅವರನ್ನ ಸುಲಿಗೆ ಮಾಡುವುದಕ್ಕೆ ನಿಂತು ಬಿಡುತ್ತಾರೆ, ಅನ್ನೋದು ಯೂಟ್ಯೂಬರ್ ಒಬ್ಬರ ಅಭಿಪ್ರಾಯವಾಗಿದೆ.
ಡೆಲ್ ಫಿಲಿಪ್, ಓರ್ವ ಪ್ರಸಿದ್ಧ ಯೂಟ್ಯೂಬರ್, ಜೊತೆಗೆ ಸ್ಕಾಟಿಷ್ ಸ್ಟಾರ್ ಪೋಕರ್ ಆಟಗಾರ. ಇವರು ವಿಶ್ವದ ನಾನಾ ಭಾಗಗಳಿಗೆ ಭೇಟಿ ಕೊಟ್ಟು, ಅಲ್ಲಿನ ವಿಶೇಷತೆಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿಕೊಂಡಿದ್ದಾರೆ. ಅದರಲ್ಲಿ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಇದು ಬೇರೆ ರಾಷ್ಟ್ರಗಳಿಗೆ ಭೇಟಿ ಕೊಟ್ಟ ಪ್ರವಾಸಿಗರು ಎಷ್ಟು ಎಚ್ಚರಿಕೆಯಿಂದ ಇರಬೇಕು ಅಂತ ಸೂಚಿಸುವ ವಿಡಿಯೋ ಆಗಿದೆ.
ವಿಮಾನ ಸಿಬ್ಬಂದಿ ಕರೆಯಿಂದ ಆತಂಕದಿಂದಲೇ ಎದ್ದು ಹೋದ ಯುವತಿಗೆ ಕಾದಿತ್ತು ʼಅಚ್ಚರಿʼ
ಅದು ಫಿಲಿಪ್, ಭಾರತಕ್ಕೆ ಭೇಟಿ ಕೊಟ್ಟಾಗಿನ ಸಂದರ್ಭ, ಆಗ ಅವರು ಜೈಪುರಕ್ಕೆ ಹೋದಾಗ ನಡೆದ ಘಟನೆ ಇದು. ಫಿಲಿಪ್ ತಮ್ಮ ಪಾಡಿಗೆ ತಾವು ನಡೆದು ಹೋಗುತ್ತಿರುವಾಗ ಬೀದಿಬದಿಯ ವ್ಯಾಪಾರಿ ಯುವಕನೊಬ್ಬ, ಅಲ್ಲಿನ ಪ್ರಸಿದ್ಧ ತಿನಿಸೊಂದನ್ನ ಮಾರಾಟ ಮಾಡುವುದಕ್ಕೆ ಮುಂದೆ ಬರುತ್ತಾನೆ. ಆ ತಿಂಡಿಯ ಹೆಸರು ‘ಲೋಬ್ಲಾಚಿ ‘ಅಂತ. ಅದರ ಬೆಲೆ ಎಷ್ಟು ಅಂದಾಗ, ಆತ 100ಕ್ಕೆ ಎರಡು ತುಂಡು ಅಂತ ಹೇಳುತ್ತಾನೆ. ಅದು ನಿಜವಾದ ಬೆಲೆಗಿಂತ, ಡಬಲ್. ಅದನ್ನ ಕೇಳಿ ಫಿಲಿಪ್ ಶಾಕ್ ಆಗುತ್ತಾರೆ. ಆತನೊಂದಿಗೆ ಚೌಕಾಶಿ ಮಾಡುತ್ತಾರೆ. ಮೊದ ಮೊದಲು ಒಪ್ಪದ ಆ ವ್ಯಾಪಾರಿ ಕೊನೆಗೆ ಬೆಲೆ ಕಡಿಮೆ ಮಾಡುತ್ತಾನೆ. ಆದರೂ ಫಿಲಿಪ್ ಅವರಿಗೆ ಆತ ಇನ್ನೂ ಬೆಲೆ ಕಡಿಮೆ ಮಾಡಬಲ್ಲ ಅಂತ ಅನಿಸುತ್ತೆ. ಇನ್ನಷ್ಟು ಚೌಕಾಶಿ ಮಾಡಿದ ಮೇಲೆ ರೂಂ. 10ಕ್ಕೆ ಒಂದು ತುಂಡನ್ನ ಕೊಡುತ್ತಾನೆ.
ಅದೊಂದು ಅದ್ಭುತವಾದ ಸಿಹಿ ತಿಂಡಿ. ಅದು ಒಂದು ರೀತಿಯ ಹತ್ತಿನ ಮಿಠಾಯಿ ಇದ್ದಂತಿದೆ ಅಂತ ಹೇಳುತ್ತಾರೆ ಫಿಲಿಪ್. ಕೊನೆಗೆ ಇನ್ನೊಂದು 10ರೂಪಾಯಿ ಕೊಟ್ಟು ತನ್ನ ಈ ಕ್ಯಾಮರಾಗೆ ಕ್ಯಾಮರಾಮನ್ ಆಗಿದ್ದಕ್ಕೆ ಅಂತ ಹೇಳಿ ಕೊಡುತ್ತಾರೆ. ಅನೇಕ ವಿದೇಶಿ ಪ್ರವಾಸಿಗರಿಗೆ ಇಂತಹದ್ದೊಂದು ಅನುಭವ ಆಗಿರುತ್ತೆ. ಆದ್ದರಿಂದ ಬೇರೆ ಕಡೆಗಳಲ್ಲಿ ಹೋದಾಗ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರಿ ಅಂತ ಫಿಲಿಪ್ ಸಂದೇಶ ಕೊಟ್ಟಿದ್ದಾರೆ.
ಈಗ ಈ ವಿಡಿಯೋ ವೈರಲ್ ಆಗಿದ್ದು, 25 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಇನ್ನೂ 2 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಬಹುತೇಕ ಜನರು ಭಾಷೆ ಬೇರೆ ಬೇರೆ ಆಗಿರುವುದರಿಂದ ಈ ರೀತಿಯ ಗೊಂದಲಗಳು ಆಗುವುದು ಸಾಮಾನ್ಯ. ಅಂತ ಹೇಳಿದ್ದಾರೆ. ಇನ್ನು ಕೆಲವರು ಕರೆನ್ಸಿ ಮತ್ತು ರೂಪಾಯಿಯಲ್ಲಿ ವ್ಯತ್ಯಾಸ ಸಾಮಾನ್ಯ ಬಡ ವ್ಯಾಪಾರಿಗಳಿಗೆ ಅಷ್ಟಾಗಿ ಗೊತ್ತಿಲ್ಲದಿರುವುದರಿಂದ ಈ ರೀತಿ ಕನ್ಫ್ಯೂಜನ್ ಆಗಿರಲುಬಹುದು ಅಂತಾ ಹೇಳಿದ್ದಾರೆ.