
ಸಲಿಂಗಿಗಳಾದ ಕೇಸಿ ಮತ್ತು ಟ್ರೇಸಿ ಮಾರ್ಸಿಜಿಕ್ ಶಾಪಿಂಗ್ ಟ್ರಿಪ್ ನಲ್ಲಿ ಮದುವೆಯ ಉಡುಪನ್ನು ಖರೀದಿಸಿದ್ದರು. ಇಬ್ಬರು ಕೂಡ ಬಿಳಿ ಗೌನ್ ಖರೀದಿಸಿರುವುದಾಗಿ ತಿಳಿದ ಕುಟುಂಬದವರು ಇದನ್ನು ರಹಸ್ಯವಾಗಿಡಲು ನಿರ್ಧರಿಸಿದ್ದಾರೆ.
ಇವರ ವಿವಾಹದ ದಿನ ಇಬ್ಬರೂ ಒಂದೇ ರೀತಿಯ ಉಡುಪು ನೋಡಿ ಆಶ್ಚರ್ಯಗೊಡಿದ್ದಾರೆ. ಹೇ.. ಅದೇ ಉಡುಗೆ..! ಅಂತಾ ಇಬ್ಬರೂ ನಕ್ಕಿದ್ದಾರೆ. ಇವರಿಬ್ಬರು ಕೊಟ್ಟ ರಿಯಾಕ್ಷನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಗಸ್ಟ್ 13 ರಂದು ಅಮೆರಿಕದ ರೋಡ್ ಐಲ್ಯಾಂಡ್ ನ ಫೋಸ್ಟರ್ ಕಂಟ್ರಿ ಕ್ಲಬ್ ನಲ್ಲಿ ಆರತಕ್ಷತೆ ನಡೆಯಿತು, ಛಾಯಾಚಿತ್ರಗ್ರಾಹಕ ಸ್ಟೇಸಿ ಸ್ಮಿತ್ ಈ ದಂಪತಿಯ ಕ್ಯೂಟ್ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿವೆ.