ಕಾಡು ಪ್ರಾಣಿಗಳು ಮತ್ತು ಮನುಷ್ಯರು ಶಾಂತಿಯುತವಾಗಿ ಸಹಬಾಳ್ವೆ ನಡೆಸಬಹುದು ಎಂದು ನೀವು ನಂಬುತ್ತೀರಾ ? ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಫೋಟೋ ಇದು ನಿಜವಾಗಿರಬಹುದು ಎಂದು ಸೂಚಿಸುತ್ತದೆ.
ಐಎಫ್‌ಎಸ್ ಅಧಿಕಾರಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರವು ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಿದೆ. ಕಲ್ಲಿನ ಪ್ರದೇಶದಲ್ಲಿ ನೆಲೆಗೊಂಡಿರುವ ಸಣ್ಣ ದೇವಾಲಯದಲ್ಲಿ ಒಬ್ಬ ವ್ಯಕ್ತಿ ಪ್ರಾರ್ಥನೆ ಮಾಡುತ್ತಿರುವುದನ್ನು ಚಿತ್ರ ತೋರಿಸುತ್ತದೆ. ಎಚ್ಚರಿಕೆಯಿಂದ ನೋಡಿದರೆ ಬಂಡೆಯ ಮೇಲೆ ಚಿರತೆ ವಿಶ್ರಾಂತಿ ಪಡೆಯುವುದನ್ನು ನೀವು ಗುರುತಿಸಬಹುದು.
ಈ ವ್ಯಕ್ತಿಗೆ ಚಿರತೆ ಇರುವುದು ತಿಳಿದಿದೆಯೇ ಇಲ್ಲವೇ ಗೊತ್ತಿಲ್ಲ. ಆದರೆ ಸಾಮಾನ್ಯವಾಗಿ ಪ್ರಾಣಿಗಳಿಗಂತೂ ಹತ್ತಿರ ಮನುಷ್ಯ ಇದ್ದರೆ ಸುಲಭದಲ್ಲಿ ಗೊತ್ತಾಗುತ್ತದೆ.
ಆದರೆ ಇಬ್ಬರೂ ಆರಾಮಾವಾಗಿ ಇದ್ದಾರೆ. ಅಷ್ಟಕ್ಕೂ ಪ್ರಾಣಿಗಳು ಮನುಷ್ಯರಂತೆ ಅಲ್ಲ ಬಿಡಿ. ಹೊಟ್ಟೆ ತುಂಬಿದಾಗ ಅದು ತನ್ನ ಎದುರು ಏನೇ ಬಂದರೂ ದಾಳಿ ಮಾಡುವುದಿಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಅದು ದಕ್ಕಿಸಿಕೊಳ್ಳುತ್ತದೆ, ಮನುಷ್ಯನ ಹಾಗೆ ಅತಿ ಆಸೆ ಪಡುವುದಿಲ್ಲ.
ಸುಶಾಂತ್ ನಂದಾ ಅವರು ಶೀರ್ಷಿಕೆಯಲ್ಲಿ “ಸಹಬಾಳ್ವೆ” ಎಂದು ಹೇಳಿದ್ದಾರೆ.