ಉದಯಪುರದಲ್ಲಿ ರಸ್ತೆಯೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಬೈಕ್ ಸವಾರನಿಗೆ ಶಾಕ್ ನೀಡಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಿಲ್ಪಗ್ರಾಮ ಮುಖ್ಯ ರಸ್ತೆಯಲ್ಲಿ ಹಾಲು ಮಾರುವ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಇದ್ದಕ್ಕಿದ್ದಂತೆ ಚಿರತೆಯೊಂದು ರಸ್ತೆಗೆ ನುಗ್ಗಿದೆ. ವೇಗವಾಗಿ ಬರುತ್ತಿದ್ದ ಬೈಕ್ ಸವಾರ ಚಿರತೆಯನ್ನು ನೋಡಿ ಬೆಚ್ಚಿಬಿದ್ದಿದ್ದಾನೆ. ನಿಯಂತ್ರಣ ತಪ್ಪಿ ಬೈಕ್ ಜಾರಿ ಬಿದ್ದಿದೆ ಮತ್ತು ಚಿರತೆಗೂ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ನಂತರ ಚಿರತೆ ರಸ್ತೆಯ ಮಧ್ಯದಲ್ಲಿ ಸ್ವಲ್ಪ ಹೊತ್ತು ಕುಳಿತ್ತಿತ್ತು. ಇಬ್ಬರು ವ್ಯಕ್ತಿಗಳು ಸಹಾಯಕ್ಕೆ ಧಾವಿಸಲು ಪ್ರಯತ್ನಿಸಿದರಾದರೂ ಚಿರತೆ ಅಲ್ಲಿಯೇ ಕುಳಿತಿರುವುದನ್ನು ಕಂಡು ಹೆದರಿ ಹಿಂದೆ ಸರಿದರು. ನಂತರ ಸ್ಥಳೀಯರು ಧೈರ್ಯದಿಂದ ಮುಂದೆ ಬಂದು ಹಾಲು ಮಾರುವ ವ್ಯಕ್ತಿಗೆ ಸಹಾಯ ಮಾಡಿದ್ದು ಅವನು ಸುರಕ್ಷಿತವಾಗಿದ್ದಾನೆ ಎಂದು ಖಚಿತಪಡಿಸಿದರು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿರತೆಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
#Udaipur में दूध वाले की बाइक से टकराया #leopard pic.twitter.com/a1EA2004P6
— Kapil Shrimali (@KapilShrimali) February 10, 2025