ಚಿರತೆಯೊಂದು ಬೆಂಗಳೂರಿನ ರೈಲು ವೀಲ್ ಫ್ಯಾಕ್ಟರಿ (ಆರ್‌ಡಬ್ಲ್ಯೂಎಫ್) ಕ್ಯಾಂಪಸ್‌ಗೆ ಕೆಲವು ದಿನಗಳ ಹಿಂದೆ ಬಂದಿದ್ದು, ಗೂಡ್ಸ್ ರೈಲು ಬೋಗಿಗಳಲ್ಲಿ ಚಿರತೆ ಹಿಕ್ಕೆಗಳು ಕಂಡುಬಂದಿದೆ.
ಚಿರತೆ ಹಿಕ್ಕೆಗಳು ಆರ್‌ಡಬ್ಲ್ಯೂಎಫ್ ಕ್ಯಾಂಪಸ್ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಅಲೆದಾಡುತ್ತಿರುವ ಹೆಣ್ಣು ಚಿರತೆ ಗೂಡ್ಸ್ ರೈಲಿನಲ್ಲಿ ಸವಾರಿ ಮಾಡುತ್ತಿದೆ ಎಂದು ಸೂಚಿಸುವಂತಿದೆ.
ರೈಲ್ವೆ ವ್ಹೀಲ್ ಫ್ಯಾಕ್ಟರಿ ಕ್ಯಾಂಪಸ್ ನಗರ ಪ್ರದೇಶಗಳಿಂದ ಸುತ್ತುವರಿದಿದೆ. ಹೀಗಾಗಿ ದೂರದಲ್ಲಿರುವ ದೊಡ್ಡಬಳ್ಳಾಪುರ, ಕೆಆರ್ ಪುರಂ, ಕಗ್ಗಲಿಪುರ ಅರಣ್ಯ ಪ್ರದೇಶದಿಂದ ಕೋಚ್ ಮೂಲಕ ಬಂದಿರಬಹುದು ಎಂದು ಅಂದಾಜಿಸಲಾಗಿದೆ.
ಕ್ಯಾಂಪಸ್ ದೊಡ್ಡದಾಗಿದೆ ಮತ್ತು ಮಿನಿ-ಫಾರೆಸ್ಟ್ ಪ್ಯಾಚ್ ಹೊಂದಿದ್ದರೂ ಸಹ, ಚಿರತೆಗಳ ಆವಾಸಸ್ಥಾನಗಳಿಲ್ಲ. ಆದ್ದರಿಂದ, ಅದು ಕ್ಯಾಂಪಸ್‌ಗೆ ಬರಬಹುದಾದ ಏಕೈಕ ಮಾರ್ಗವೆಂದರೆ ಗೂಡ್ಸ್ ರೈಲಿನಲ್ಲಿ ಸವಾರಿ ಮಾಡುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿ, ಅನೇಕ ಕೋಚ್‌ಗಳು ರಿಪೇರಿಗಾಗಿ ಇಲ್ಲಿಗೆ ಬರುತ್ತವೆ. ಚಿರತೆ ಅಂತಹ ಒಂದು ರೈಲಿನ ಕೋಚ್‌ಗೆ ನುಸುಳಿರಬಹುದು. ರೈಲ್ವೇ ತಂಡಗಳು ಬೋಗಿಯೊಂದರಲ್ಲಿ ಚಿರತೆಯ ಹಿಕ್ಕೆಗಳನ್ನು ಕಂಡುಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮಧ್ಯೆ ಕ್ಯಾಂಪಸ್‌ನಲ್ಲಿ ಅಲರ್ಟ್ ಘೋಷಿಸಲಾಗಿದೆ ಮತ್ತು ಅಲ್ಲಿನ ನಿವಾಸಿಗಳಿಗೆ ರಾತ್ರಿಯಲ್ಲಿ ಹೊರಗೆ ಹೋಗದಂತೆ ತಿಳಿಸಲಾಗಿದೆ.
ಮಾರ್ಚ್ 27 ರ ರಾತ್ರಿ ಅರಣ್ಯ ಸಿಬ್ಬಂದಿ ಇಟ್ಟಿದ್ದ ಬೋನಿನ ಬಳಿ ಚಿರತೆ ಮತ್ತೆ ಕಾಣಿಸಿಕೊಂಡ ನಂತರ ಈ ಎಚ್ಚರಿಕೆ ನೀಡಲಾಗಿದೆ. ಅದು ಬಲೆಯ ಸುತ್ತಲೂ ಅಲೆದಾಡಿತು ಆದರೆ ಪಂಜರವನ್ನು ಪ್ರವೇಶಿಸಲಿಲ್ಲ.
ಪಂಜರದಲ್ಲಿ ಮಾಂಸ, ಕುರಿಮರಿ ಮತ್ತು ಜೀವಂತ ಮೇಕೆಯನ್ನು ಇರಿಸಲಾಗಿತ್ತು. ನಿವಾಸಿಗಳು ಗುಂಪುಗಳಲ್ಲಿ ಚಲಿಸುವಂತೆ ಸೂಚಿಸಲಾಗಿದೆ ಮತ್ತು ಅಗತ್ಯವಿದ್ದರೆ, ಅವರು ಕೋಲು ಅಥವಾ ಟಾರ್ಚ್ ಅನ್ನು ಕೊಂಡೊಯ್ಯಬೇಕು ಎಂದು ತಿಳಿಸಲಾಗಿದೆ.