ಮುಂಬೈ: ಮಹಾನಗರಿ ಮುಂಬೈನ ಆರೆ ಕಾಲೋನಿ ಘಟಕದಲ್ಲಿ ಭಾರಿ ಮಳೆಯ ನಡುವೆ ಬೀದಿ ಬೀದಿಯಲ್ಲಿ ಓಡಾಡುತ್ತಿದ್ದ ಹೆಣ್ಣು ಚಿರತೆ ಮರಿಯನ್ನು ರಕ್ಷಿಸಿ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ.
ಚಿರತೆ ಮರಿಯನ್ನು ಗಮನಿಸಿದ ಸ್ಥಳೀಯರು ಪ್ರಾಣಿ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ವಿಡಿಯೋ ಚಿತ್ರೀಕರಿಸಿದ್ದು, ಮರಿಯು ಆಶ್ರಯ ಪಡೆಯುವ ಮೊದಲು ಕಲ್ಲು-ಮಣ್ಣುಗಳಿಂದ ತುಂಬಿದ ಶಿಥಿಲವಾದ ರಸ್ತೆಯ ಮೇಲೆ ನಿಧಾನವಾಗಿ ನಡೆಯುತ್ತಿರುವುದನ್ನು ಕಾಣಬಹುದು. ಇನ್ನೊಂದು ಕ್ಲಿಪ್‌ನಲ್ಲಿ ಪ್ರಾಣಿ ರಕ್ಷಣಾ ಸಿಬ್ಬಂದಿ ಮರಿಯನ್ನು ಕಂಬಳಿಯಲ್ಲಿ ಹಿಡಿದಿರುವುದನ್ನು ಕಾಣಬಹುದು.
ಹೆಣ್ಣು ಚಿರತೆ ಮರಿಗೆ ಕೇವಲ 45 ದಿನ ವಯಸ್ಸಾಗಿದೆ. ಹಚ್ಚ ಹಸಿರಿನ ವಸಾಹತು ಪ್ರದೇಶವಾಗಿರುವ ಆರೆ ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಇದು ನಗರದಲ್ಲಿ ಉಳಿದಿರುವ ಕೆಲವು ಹಸಿರು ಸ್ಥಳಗಳಲ್ಲಿ ಒಂದಾಗಿದೆ.
ಪೊಲೀಸರ ಭರ್ಜರಿ ಬೇಟೆ: IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ, ಬರೋಬ್ಬರಿ 23 ಬುಕ್ಕಿಗಳು ಅರೆಸ್ಟ್
2019 ರಲ್ಲಿ ಕಾಡಿನಲ್ಲಿ 2,700 ಮರಗಳನ್ನು ಕಡಿದಾಗ ಕಾಲೋನಿಯು ಸುದ್ದಿಯಾಗಿತ್ತು. ಇದರ ನಂತರ ಸ್ಥಳೀಯರು ಮತ್ತು ರಾಜ್ಯದ ಜನರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆರೇ ಅರಣ್ಯವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತದೆ.