
ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಯುವತಿ ಬಲಿಯಾಗಿದ್ದಾರೆ. ಎಸ್. ಕೆಬ್ಬೆಹುಂಡಿ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ ಮೇಘನಾ ಮೇಲೆ ಚಿರತೆ ದಾಳಿ ಮಾಡಿತ್ತು.
ಗಾಯಾಳು ಯುವತಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೇಘನಾ(20) ಸಾವನ್ನಪ್ಪಿದ್ದಾರೆ.
ಕಳೆದು ತಿಂಗಳು ಓರ್ವ ಯುವಕನನ್ನು ಚಿರತೆ ಕೊಂದು ಹಾಕಿತ್ತು. ಟಿ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಮೇಘನಾ ಎರಡನೇ ಬಲಿಯಾಗಿದ್ದಾರೆ. ಚಿರತೆ ದಾಳಿಯಿಂದಾಗಿ ಜನ ಮನೆಯಿಂದ ಹೊರಬರಲು ಹೆದರುತಿದ್ದಾರೆ. ಕೂಡಲೇ ಚಿರತೆ ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಎಸ್. ಕೆಬ್ಬೆಹುಂಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.