alex Certify ಒದ್ದಾಡುತ್ತಿದ್ದ ಆಮೆ ಸಹಾಯಕ್ಕೆ ಧಾವಿಸಿದ ಎಮ್ಮೆ…! ಬೆರಗಾಗಿಸುತ್ತೆ ಮೂಕಪ್ರಾಣಿಗಳ ಮಾನವೀಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒದ್ದಾಡುತ್ತಿದ್ದ ಆಮೆ ಸಹಾಯಕ್ಕೆ ಧಾವಿಸಿದ ಎಮ್ಮೆ…! ಬೆರಗಾಗಿಸುತ್ತೆ ಮೂಕಪ್ರಾಣಿಗಳ ಮಾನವೀಯತೆ

Lending a 'Horn': Beautiful Video Shows Buffalo Saving a Tortoise by  Flipping it Overಮೂಕ ಪ್ರಾಣಿಗಳಾದ್ರೂ ಕೂಡ ಮನುಷ್ಯರಿಗಿಂತಲೂ ಮಾನವೀಯತೆಯ ಗುಣವನ್ನು ಪ್ರಾಣಿಗಳು ಹೊಂದಿರುತ್ತವೆ. ಒಂದು ಪ್ರಾಣಿಯು ಮತ್ತೊಂದು ಪ್ರಾಣಿಗೆ ಸಹಾಯ ಮಾಡುವ ವಿಡಿಯೋಗಳನ್ನು ಬಹುಶಃ ನೀವು ಅಂತರ್ಜಾಲದಲ್ಲಿ ನೋಡಿರುತ್ತೀರಿ. ಇದೀಗ ಇಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಮೆಯೊಂದು ಉಲ್ಟಾ ಮಗುಚಿ ಬಿದ್ದು ನೇರವಾಗಲು ಒದ್ದಾಡುತ್ತಿತ್ತು. ಇದನ್ನು ಗಮನಿಸುತ್ತಾ ನಿಂತಿದ್ದ ಎಮ್ಮೆಯೊಂದು ಹತ್ತಿರ ಬಂದು ಆಮೆಗೆ ಸಹಾಯ ಮಾಡಿದೆ. ತನ್ನ ಕೊಂಬಿನ ಮೂಲಕ ಮಗುಚಿ ಬಿದ್ದಿದ್ದ ಆಮೆಯನ್ನು ಸಹಜ ಸ್ಥಿತಿಯತ್ತ ತಂದಿದೆ. ಈ ಅದ್ಭುತ ದೃಶ್ಯದ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತಾ ನಂದ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ.

ಇನ್ನು ಆಮೆಗೆ ಸಹಾಯ ಮಾಡಿದ ಎಮ್ಮೆಯ ವಿಡಿಯೋ ನೋಡಿದ ನೆಟ್ಟಿಗರು ಭಾವಪರಶರಾಗಿದ್ದಾರೆ. ಮನುಷ್ಯರು ಪ್ರಾಣಿಗಳಿಂದ ನೋಡಿ ಕಲಿಯುವುದು ಅನೇಕವಿದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ವ್ಯಕ್ತಿಯೊಬ್ಬ, ನಾಯಿಯನ್ನು ಹಿಂಸಿಸುತ್ತಿದ್ದಾಗ ದೂರದಲ್ಲಿ ನೋಡುತ್ತಿದ್ದ ಹಸುವೊಂದು ಬಂದು ಆತನಿಗೆ ತಿವಿದಿತ್ತು. ಈ ಮೂಲಕ ನಾಯಿಯನ್ನು ರಕ್ಷಿಸಿತ್ತು. ಇದೇ ಅಲ್ವಾ ನಿಜವಾದ ಸ್ನೇಹ, ಪ್ರೀತಿ ಅಂದ್ರೆ..? ಮನುಷ್ಯನಿಗಿರದ ಕರುಣೆ, ದಯೆ, ಪ್ರಾಣಿಗಳಿಗಿವೆ. ಅವುಗಳಿಗೆ ಮಾತು ಬರದಿದ್ದರೂ ಕೂಡ ಮಾನವೀಯ ಮೌಲ್ಯವನ್ನು ಅವುಗಳಿಂದ ನೋಡಿ ಕಲಿಯಬೇಕಾದುದು ಸಾಕಷ್ಟಿದೆ.

https://twitter.com/susantananda3/status/1471700209855991811?ref_src=twsrc%5Etfw%7Ctwcamp%5Etweetembed%7Ctwterm%5E1471700209855991811%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Flending-a-horn-beautiful-video-shows-buffalo-saving-a-tortoise-by-flipping-it-over-4565996.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...