ತೂಕ ಇಳಿಸಿಕೊಳ್ಳಬೇಕೆಂದು ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿಯುತ್ತಿದ್ದೀರಾ, ಅದರೊಂದಿಗೆ ಈ ಕೆಲವು ಅಭ್ಯಾಸಗಳನ್ನು ಸೇರಿಸಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮ್ಮ ತೂಕ ಗಮನಾರ್ಹವಾಗಿ ಇಳಿಯುವುದನ್ನು ನೀವೇ ನೋಡಿ.
ಚಹಾ ತಯಾರಿಸುವಾಗ ಅದಕ್ಕೆ ಹಾಲು ಬೆರೆಸುವ ಬದಲು ನಿಂಬೆರಸ ಬೆರೆಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದು ತೂಕ ಇಳಿಸಿಕೊಳ್ಳುವವರ ಅತ್ಯುತ್ತಮ ಆಯ್ಕೆ. ಇದರಲ್ಲಿ ಕರಗಬಲ್ಲ ಫೈಬರ್ ಇದ್ದು ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುತ್ತದೆ.
ನಿರ್ದಿಷ್ಟ ಪ್ರಮಾಣದಲ್ಲಿ ಇದನ್ನು ಸೇವಿಸುವುದರಿಂದ ದೇಹ ತೂಕ ಇಳಿಸಿಕೊಳ್ಳಬಹುದು. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಮಹಿಳೆಯರಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಅಭಿವೃದ್ಧಿ ಪಡಿಸುತ್ತದೆ. ಕ್ಯಾಲೊರಿಯನ್ನೂ ನಿಯಂತ್ರಿಸುತ್ತದೆ.
ನಿಂಬೆ ಚಹಾ ತಯಾರಿಸುವಾಗ ಸಿಹಿ ಬೇಕು ಎನ್ನುವವರು ಸಕ್ಕರೆ ಬದಲಿಗೆ ಜೇನುತುಪ್ಪ ಬೆರೆಸಿ. ಇದು ಕೂಡಾ ತೂಕ ಇಳಿಸಲು ನೆರವಾಗುತ್ತದೆ. ಇದನ್ನು ತಯಾರಿಸುವ ವೇಳೆ ಮೊದಲು ನೀರು ಕುದಿಸಿ. ಚಹಾ ಪುಡಿ ಸೇರಿಸಿ. ಮತ್ತೆ ಒಂದು ನಿಮಿಷ ಕುದಿಸಿ. ಬಳಿಕ ಕೆಳಗಿಳಿಸಿ. ಸೋಸಿ. ಕುಡಿಯುವ ಮುನ್ನ ನಿಂಬೆರಸ ಹಿಂಡಿ. ಜೇನುತುಪ್ಪ ಸೇರಿಸುವುದಾದರೆ ನೀರು ಹದ ಬಿಸಿ ಇರುವಾಗ ಸೇರಿಸಿ ಆದರೆ ಇದನ್ನು ದಿನಕ್ಕೆರಡು ಬಾರಿಗಿಂತ ಹೆಚ್ಚು ಸಾರಿ ಕುಡಿಯುವುದು ಒಳ್ಳೆಯದಲ್ಲ.