ನಿಂಬು ರಸದಲ್ಲಿ ಸಾಕಷ್ಟು ಪೌಷ್ಟಿಕ ಅಂಶ ಅಡಗಿದೆ. ಇದು ನಮ್ಮ ದೇಹದ ಆರೋಗ್ಯ ಹಾಗೂ ಸೌಂದರ್ಯವನ್ನ ಹೆಚ್ಚಿಸುವಲ್ಲಿ ತುಂಬಾನೇ ಉಪಕಾರಿ. ಹೀಗಾಗಿ ಅನೇಕ ಮಂದಿ ನಿಂಬು ರಸವನ್ನ ಚರ್ಮ ಹಾಗೂ ಕೂದಲಿನ ಆರೈಕೆಗೆ ಬಳಕೆ ಮಾಡುತ್ತಾರೆ. ಆದರೆ ನಿಂಬು ರಸದಂತೆಯೇ ನಿಂಬು ಸಿಪ್ಪೆ ಕೂಡ ಪ್ರಯೋಜನಕಾರಿ ಅನ್ನೋದನ್ನ ಅನೇಕರು ಅರಿತಿಲ್ಲ. ನಿಂಬೆ ಹಣ್ಣಿನ ಸಿಪ್ಪೆ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.
ನಿಂಬೆ ಹಣ್ಣಿನಲ್ಲಿ ಬ್ಲೀಚಿಂಗ್ ಅಂಶವಿದೆ. ಇದರಲ್ಲಿರುವ ಆಸಿಡ್ ಅಂಶ ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಅಲ್ಲದೇ ಮುಖದಲ್ಲಿನ ಕಲೆಗಳನ್ನ ದೂರ ಮಾಡುವಲ್ಲಿಯೂ ನಿಂಬು ಸಹಕಾರಿ.
ಕೇವಲ ಮುಖದ ಸೌಂದರ್ಯ ಮಾತ್ರವಲ್ಲದೇ ಅಡುಗೆ ಮನೆಯಲ್ಲಿ ಏನಾದರೂ ಕಲೆಗಳು ಆಗಿದ್ದರೆ ನಿಂಬೆ ಹಣ್ಣಿನ ಸಿಪ್ಪೆ ನಿಮಗೆ ಸಹಾಯಕವಾಗಬಲ್ಲದು. ಮನೆಯ ಬಾಗಿಲು ಹಾಗೂ ಕಿಟಕಿಯ ಸಂದುಗಳಲ್ಲಿ ನಿಂಬು ಸಿಪ್ಪೆಗಳನ್ನ ಇಡೋದ್ರಿಂದ ಇರುವೆ ಕಾಟದಿಂದ ಮುಕ್ತಿ ಸಿಗಲಿದೆ.
ನಿಂಬೆ ಹಣ್ಣಿನ ಸಿಪ್ಪೆಯಿಂದ ತಾಮ್ರ, ಸ್ಟೀಲ್ ಹಾಗೂ ಹಿತ್ತಾಳೆ ಪಾತ್ರೆಗಳಿಗೆ ಹೊಳಪು ನೀಡಬಹುದಾಗಿದೆ. ನಿಂಬೆ ಹಣ್ಣಿನ ಸಿಪ್ಪೆಯನ್ನ ಬಳಸಿ ಪಾತ್ರೆಗಳನ್ನ ತೊಳೆಯೋದ್ರಿಂದ ಕಲೆಗಳು ದೂರಾಗಲಿದೆ. ಹಾಗೂ ಪಾತ್ರೆಗೆ ಹೊಳಪು ಸಿಗಲಿದೆ.