ನಿಂಬೆಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ. ಎಂಥವರಿಗೂ ನಿಂಬೆ ಗೊತ್ತಿರುವ ಹಣ್ಣು. ಅಡುಗೆಗೆ, ಆರೋಗ್ಯಕ್ಕೆ, ದೇವರ ಪೂಜೆಗೂ ನಿಂಬೆ ಮುಖ್ಯವಾದುದು.
ಸಾಮಾನ್ಯವಾಗಿ ನಿಂಬೆ ರುಚಿಗೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯಕ್ಕೂ ಮುಖ್ಯ. ತ್ವಚೆಗೂ ಕೂಡ ನಿಂಬೆ ಒಳ್ಳೆಯ ಮನೆ ಔಷಧ. ನಿಂಬೆ ನೋಡಲು ಚಿಕ್ಕ ಹಣ್ಣಾದರೂ ಅದರ ಕೆಲಸ ಅಘಾದವಾದದ್ದು. ಪ್ರತಿನಿತ್ಯ ಬಳಸುವ ಮುಖ್ಯ ವಸ್ತುಗಳಲ್ಲಿ ನಿಂಬೆ ಕೂಡ ಮುಖ್ಯವಾಗಿರುವ ತಿನ್ನುವ ಪದಾರ್ಥ.
ಮೂಲತಃ ಏಷ್ಯಾದ ಮೂಲದ್ದಾಗಿರುವ ಈ ನಿಂಬೆ. ರುಚಿಯಲ್ಲಿ ಹುಳಿಯಾಗಿದ್ದು, ಸ್ವಲ್ಪ ಒಗರು ಒಗರಾಗಿರುತ್ತದೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯಾಗಿದೆ ನಿಂಬೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಾಮಿನ್ ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ ಹೆಸರು Citrus aurantifolia.
ಈ ನಿಂಬೆಯೂ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ನಿಂಬೆಯಿಂದ ಹಲವು ರೋಗಗಳಿಗೆ ಮನೆ ಔಷಧಗಳನ್ನು ಮಾಡಬಹುದಾಗಿದೆ.
ಹಲ್ಲಿನ ನೋವಿಗೆ ನಿಂಬೆ ಹಣ್ಣು ರಾಮಬಾಣ. ನೋವಿರುವ ಹಲ್ಲಿನ ಮೇಲೆ ಒಂದು ಹನಿ ನಿಂಬೆಯ ರಸ ಹಾಕಿದರೆ ಸಾಕು. ನೋವು ಕಡಿಮೆಯಾಗುತ್ತದೆ. ಇನ್ನು ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಗಮ್ ಮೇಲೆ ನಿಂಬೆ ರಸ ಹಾಕಿ ಉಜ್ಜಿದರೆ ರಕ್ತಸ್ರಾವ ಕಡಿಮೆಯಾಗುತ್ತದೆ.
ಇನ್ನು ಈ ನಿಂಬೆ ಕೂದಲಿಗೂ ಕೂಡ ಉಪಯುಕ್ತವಾಗಿದೆ. ಹೊಟ್ಟು ಹೆಚ್ಚಾದಲ್ಲಿ ಕೊಬ್ಬರಿ ಎಣ್ಣೆ ಜೊತೆ ನಿಂಬೆ ರಸ ಬೆರೆಸಿ ಉಪಯೋಗಿಸುವುದರಿಂದ ಹೊಟ್ಟು ಕಡಿಮೆ ಮಾಡಬಹುದು. ಇನ್ನು ತೆಂಗಿನ ನೀರಿನ ಜೊತೆ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ವುವುದರಿಂದ ದಪ್ಪ ಹಾಗೂ ಸದೃಡ ಕೂದಲು ಬೆಳೆಯುವುದು.
ನಿಂಬೆ ರಸದೊಂದಿಗೆ ಸೀಗೆ ಪುಡಿಯನ್ನು ಸೇರಿಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.
ನಿಂಬೆ ರಸ ವಾಕರಿಕೆ, ತಲೆಸುತ್ತುವಿಕೆ, ಸುಸ್ತು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲ ಒತ್ತಡ ಖಿನ್ನತೆಗಳಿಗೂ ನಿಂಬೆ ರಾಮಬಾಣವಾಗಿದೆ. ಇನ್ನು ಅಸ್ತಮಾಗೂ ಒಳ್ಳೆಯ ಔಷಧಿ ಎನ್ನಲಾಗುತ್ತದೆ.
ತ್ವಚೆ ಕಾಂತಿಯುತವಾಗುವುದಕ್ಕೂನಿಂಬೆ ಹಣ್ಣನ್ನು ಬಳಸುತ್ತಾರೆ. ಮೊಣಕೈಗಳಲ್ಲಿ ಕಪ್ಪಾಗಿದ್ದರೆ ಆ ಜಾಗಕ್ಕೆ ನಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಉಜ್ಜುವುದರಿಂದ ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದು. ಒಟ್ನಲ್ಲಿ ತ್ವಚೆಗೂ ನಿಂಬೆ ಅತ್ಯುತ್ತಮ ಔಷಧವಾಗಿದೆ.
ನಿಂಬೆ ಹಣ್ಣು, ಹಾಲಿನ ಕೆನೆ, ಜೇನುತುಪ್ಪವನ್ನು ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚಿಸುತ್ತದೆ.