ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಅಂಗೀಕಾರಗೊಂಡಿದೆ.
ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಹಾಗೂ ಇದಕ್ಕೆ ಸಂಬಂಧಿಸಿದ ಪ್ರಾಸಂಗಿಕವಾದ ವಿಷಯಗಳಲ್ಲಿ ಅವರ ಮೇಲಿನ ಹಿಂಸೆ ನಿಷೇಧಿಸಲು ರಕ್ಷಣೆ ಒದೆಗಿಸುವ ಉದ್ದೇಶವನ್ನು ವಿಧೇಯಕ ಹೊಂದಿದೆ.
ಬೆದರಿಕೆ, ಅಡ್ಡಿ, ಕಿರುಕುಳ, ಅನುಚಿತ ಹಸ್ತಕ್ಷೇಪ ರಹಿತವಾಗಿ ವೃತ್ತಿಪರ ಕಾರ್ಯ ನಿರ್ವಹಣೆ, ದೇಶ, ವಿದೇಶಗಳಲ್ಲಿ ಮುಕ್ತ ಪ್ರಯಾಣ, ಕಕ್ಷಿದಾರರೊಂದಿಗೆ ಸಮಾಲೋಚನೆಗೆ ಅವಕಾಶ, ವೃತ್ತಿಪರ ಕರ್ತವ್ಯಗಳು, ನೈಜತೆಗಳ ಅನುಸಾರ ತೆಗೆದುಕೊಂಡ ಕ್ರಮಕ್ಕೆ ಅಭಿಯೋಜನೆ ಅಥವಾ ಇತರೆ ಶಿಕ್ಷೆಗಳನ್ನು ಅನುಭವಿಸತಕ್ಕದ್ದಲ್ಲ ಎಂಬುದನ್ನು ಸರ್ಕಾರಗಳು ಖಚಿತಪಡಿಸತಕ್ಕದ್ದು, ಬೆದರಿಕೆ ಸಂದರ್ಭದಲ್ಲಿ ಪ್ರಾಧಿಕಾರಗಳು ಅವರನ್ನು ಸಂಪೂರ್ಣವಾಗಿ ಸಂರಕ್ಷಿಸತಕ್ಕದ್ದು ಎನ್ನುವ ಉದ್ದೇಶವನ್ನು ವಿಧೇಯಕ ಹೊಂದಿದೆ.