ಒಂದೇ ಲಿಂಗಿಗಳ ಮದುವೆಯನ್ನು ಅಧಿಕೃತಗೊಳಿಸುವ ಮಾತುಗಳಿಗೆ ಕೇಂದ್ರ ಸರ್ಕಾರ ನಕಾರಾತ್ಮಕವಾಗಿ ಸ್ಪಂದಿಸಿದ ಬಳಿಕ ಇದೀಗ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ವಿರೋಧ ವ್ಯಕ್ತ ಪಡಿಸಿದ್ದಾರೆ.
“ಒಂದೇ ಲಿಂಗದ ಮದುವೆಗಳು ನಗರಗಳಲ್ಲಿರುವ ಸ್ಥಿತಿವಂತರಿಗೆ ಸೀಮಿತವಾದ ವಿಚಾರವಲ್ಲ. ಅದು ಮಾನವೀಯ ಅಗತ್ಯ. ಬಹುಶಃ ಸಣ್ಣಪುಟ್ಟ ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ಓಡಾಡದ ಸರ್ಕಾರಿ ದೊರೆಗಳು ಅಥವಾ ಮುಂಬೈ ಸ್ಥಳೀಯರು ಹೀಗೆ ಹೇಳಿರಬಹುದು. ಮೊದಲಿಗೆ, ಒಂದೇ ಲಿಂಗದ ಮದುವೆ ಒಂದು ಕಾನ್ಸೆಪ್ಟ್ ಅಲ್ಲ. ಅದೊಂದು ಅಗತ್ಯ. ಅದೊಂದು ಹಕ್ಕು, ಹಾಗೂ ಪ್ರಗತಿಪರವಾದದ್ದು……” ಎಂದು ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಬೆಂಬಲದ ಟ್ವೀಟ್ ಮಾಡಿರುವ ನಿರ್ದೇಶಕ ಹನ್ಸಾಲ್ ಮೆಹ್ತಾ, “ಕಮ್ ಆನ್ ಸುಪ್ರೀಂ ಕೋರ್ಟ್! ದಾರಿ ತೋರಿಸಿ. ಒಂದೇ ಲಿಂಗದ ಮದುವೆಗಳನ್ನು ಅಧಿಕೃತಗೊಳಿಸಿ,” ಎಂದು ಟ್ವೀಟ್ ಮಾಡಿದ್ದಾರೆ.
ಅಮೇಜ಼ಾನ್ ಪ್ರೈಂನಲ್ಲಿರುವ ’ಮಾಡರ್ನ್ ಲವರ್ ಮುಂಬಯಿ’ ಹೆಸರಿನ ಸರಣಿಯಲ್ಲಿ ಸಲಿಂಗಿ ಜೋಡಿಗಳ ಹಾಡು-ಪಾಡಿನ ಕುರಿತು ಬೆಳಕು ಚೆಲ್ಲಿದ್ದಾರೆ ಹನ್ಸಾಲ್ ಮೆಹ್ತಾ.