ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮುಂದೆ ಮದ್ಯ ಖರೀದಿಸಲು 25 ವರ್ಷದ ಬದಲಿಗೆ 21 ವರ್ಷ ವಯಸ್ಸಾಗಿದ್ದರೆ ಸಾಕು.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು ಮಾಹಿತಿ ನೀಡಿದ್ದು, ಕನಿಷ್ಠ 25 ವರ್ಷ ವಯಸ್ಸಾದವರಿಗೆ ಮದ್ಯ ಮಾರಾಟ ಮಾಡಬೇಕೆಂಬ ನಿಯಮವನ್ನು 21 ವರ್ಷಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
25 ವರ್ಷ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬೇಕೆಂಬ ನಿಯಮ 6 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿದ್ದು, ಇದರಲ್ಲಿ ದೆಹಲಿ ಕೂಡ ಸೇರಿತ್ತು. ಈಗ ದೆಹಲಿಯಲ್ಲಿ 21 ವರ್ಷ ವಯಸ್ಸಾದವರಿಗೆ ಮದ್ಯ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.