
ಹೊಸಪೇಟೆ: ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿದ್ದರಿಂದ ಎಲ್ಇಡಿ ಪರದೆಗೆ ಕಲ್ಲು ತೂರಿದ ಘಟನೆ ನಡೆದಿದೆ.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಎಲ್ಇಡಿ ಪರದೆಗೆ ಕಿಡಿಗೇಡಿಗಳು ಕಲ್ಲು ತೂರಿ ಹಾನಿ ಮಾಡಿದ್ದಾರೆ. ಪಂದ್ಯದ ಕೊನೆಯ ಓವರ್ ಸಂದರ್ಭದಲ್ಲಿ ಭಾರತ ಸೋಲು ಕಂಡಾಗ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಇದರಿಂದಾಗಿ ಪರದೆಗೆ ಹಾನಿಯಾಗಿದೆ.
ರಾಜ್ಯದ ಜನರಿಗೆ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತೆ ಕ್ರೀಡಾ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ಎಲ್ಇಡಿ ಪರದೆ ಹಾಕಲಾಗಿತ್ತು. ಪಂದ್ಯದಲ್ಲಿ ಭಾರತ ಸೋಲುತ್ತಿದ್ದಂತೆ ಎಲ್ಇಡಿ ಸ್ಕ್ರೀನ್ ಗೆ ಕಲ್ಲು ತೂರಿ ಹಾನಿ ಮಾಡಲಾಗಿದೆ.