alex Certify 14ನೇ ವಯಸ್ಸಿನಲ್ಲೇ ಶಾಲೆ ಬಿಟ್ಟು 30 ರೂಪಾಯಿಗೆ ಕೂಲಿ ಕೆಲಸ; ಈಗ 17 ಸಾವಿರ ಕೋಟಿ ಸಾಮ್ರಾಜ್ಯವನ್ನೇ ಕಟ್ಟಿದ ಸಾಧಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14ನೇ ವಯಸ್ಸಿನಲ್ಲೇ ಶಾಲೆ ಬಿಟ್ಟು 30 ರೂಪಾಯಿಗೆ ಕೂಲಿ ಕೆಲಸ; ಈಗ 17 ಸಾವಿರ ಕೋಟಿ ಸಾಮ್ರಾಜ್ಯವನ್ನೇ ಕಟ್ಟಿದ ಸಾಧಕ…!

ಕೇವಲ 30 ರೂಪಾಯಿ ಸಂಬಳಕ್ಕೆ ದಿನಗೂಲಿ ಕೆಲಸ ಮಾಡಿದ ವ್ಯಕ್ತಿಯೀಗ 17 ಸಾವಿರ ಕೋಟಿ ಮೌಲ್ಯದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಯುವಕರಿಗೆ ಸ್ಪೂರ್ತಿಯಾಗಬಲ್ಲ ಸಾಧನೆ ಇವರದ್ದು. ಭಾರತದ ಜವಳಿ ಮತ್ತು ಕಾಗದದ ಉದ್ಯಮದಲ್ಲಿ ಪ್ರತಿಷ್ಠಿತ ಕಂಪನಿಯಾಗಿರುವ ಟ್ರೈಡೆಂಟ್ ಗ್ರೂಪ್‌ನ ಅಧ್ಯಕ್ಷ ರಾಜಿಂದರ್ ಗುಪ್ತಾ ಇಂತಹ ಪ್ರೇರಕ ಬದುಕು ನಡೆಸಿದ್ದಾರೆ.

ಗುಪ್ತಾ ಪಂಜಾಬ್‌ನ ಹತ್ತಿ ವ್ಯಾಪಾರಿಗಳ ಕುಟುಂಬಕ್ಕೆ ಸೇರಿದವರು. 9ನೇ ತರಗತಿಯ ನಂತರ ಕೇವಲ 14 ವರ್ಷದವರಾಗಿದ್ದಾಗ ಆರ್ಥಿಕ ಅಡಚಣೆಯಿಂದಾಗಿ ಶಾಲೆಯನ್ನು ಬಿಡಬೇಕಾಯಿತು. ನಂತರ ದಿನಗೂಲಿ ಕೆಲಸಕ್ಕೆ ಅವರು ಸೇರಿಕೊಂಡರು. ದಿನಕ್ಕೆ 30 ರೂಪಾಯಿ ಸಂಬಳ, ಮೇಣದ ಬತ್ತಿ, ಸಿಮೆಂಟ್ ಪೈಪು ತಯಾರಿಕಾ ಕಾರ್ಖಾನೆಗಳಲ್ಲಿ ಕೆಲಸ.

ಹೀಗೆ ಹೋರಾಟದ ಬದುಕನ್ನು ನಡೆಸುತ್ತಿದ್ದ ಗುಪ್ತಾ 1980 ರಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿದ್ದರು. 1985 ರಲ್ಲಿ 6.5 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಅಭಿಷೇಕ್ ಇಂಡಸ್ಟ್ರೀಸ್ ಎಂಬ ರಸಗೊಬ್ಬರ ಕಾರ್ಖಾನೆಯನ್ನು ಸ್ಥಾಪಿಸಿದರು. 1991 ರಲ್ಲಿ ಕಟೈ ಮಿಲ್ ಎಂಬ ಜಂಟಿ ಕಂಪನಿಯನ್ನು ಸ್ಥಾಪಿಸಿದರು.

ನಂತರ ಜವಳಿ, ಕಾಗದ ಮತ್ತು ರಾಸಾಯನಿಕ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ತಮ್ಮ ಕಂಪನಿಯ ಹಲವಾರು ಘಟಕಗಳನ್ನು ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ಸ್ಥಾಪಿಸಿದರು. ಇದು ಟ್ರೈಡೆಂಟ್ ಗ್ರೂಪ್‌ ಎಂದೇ ಪ್ರಸಿದ್ಧಿಯಾಗಿದೆ.

ಹಲವಾರು ವರ್ಷಗಳ ಪರಿಶ್ರಮದ ಬಳಿಕ 64 ವರ್ಷದ ಗುಪ್ತಾ ಅವರು ವೈಯಕ್ತಿಕ ಕಾರಣಗಳಿಂದಾಗಿ 2022 ರಲ್ಲಿ ಟ್ರೈಡೆಂಟ್‌ನ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದರು. ಅವರು ಪ್ರಸ್ತುತ ಟ್ರೈಡೆಂಟ್ ಗ್ರೂಪ್‌ನ ಪ್ರಮುಖ ಕಂಪನಿಯಾದ ಟ್ರೈಡೆಂಟ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. 2007 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ಪ್ರಸ್ತುತ ಅವರ ನಿವ್ವಳ ಸಂಪತ್ತು 12,368 ಕೋಟಿ ರೂಪಾಯಿ.

ಉದ್ಯಮ ಜಗತ್ತಿನಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಪಂಜಾಬ್‌ನ ಧೀರೂಭಾಯಿ ಅಂಬಾನಿ ಎಂದೇ ಕರೆಯಲಾಗುತ್ತದೆ. ವಿಶೇಷವೆಂದರೆ ದಾನಧರ್ಮದಲ್ಲೂ ಗುಪ್ತಾ ಅವರದ್ದು ಎತ್ತಿದ ಕೈ. ಇತ್ತೀಚೆಗಷ್ಟೇ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) 21 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...