alex Certify ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!

ಬಾದಾಮಿಯನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗಿದೆ. ಆದರೆ ಇದು ಕೊಂಚ ದುಬಾರಿಯಾಗಿರುವುದರಿಂದ ಎಲ್ಲರೂ ಖರೀದಿಸಿ ತಿನ್ನುವುದು ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ಬಾದಾಮಿಯ ಬದಲು ನಮ್ಮ ದೇಸಿ ಕಡಲೆಕಾಯಿಯನ್ನು ತಿನ್ನಬಹುದು. ಶೇಂಗಾ ಅಥವಾ ಕಡಲೆಕಾಯಿಯಲ್ಲಿ ಬಾದಾಮಿಗೆ ಸಮಾನವಾದ ಅಥವಾ ಇನ್ನೂ ಹೆಚ್ಚಿನ ಗುಪ್ತ ಪ್ರಯೋಜನಗಳಿವೆ.

ಆದರೆ ಬಹುತೇಕರಿಗೆ ಕಡಲೆಕಾಯಿಯ ಲಾಭ ತಿಳಿದಿಲ್ಲ, ಹಾಗಾಗಿಯೇ ಇದು ನಿರ್ಲಕ್ಷಿಸಲ್ಪಡುತ್ತದೆ. ಬಾದಾಮಿ ಬದಲಿಗೆ ಕಡಲೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಿ. ಅದರ ಫಲಿತಾಂಶಗಳು ನಿಮ್ಮನ್ನು ದಂಗುಬಡಿಸುತ್ತವೆ.

ನ್ಯೂಟ್ರಿಷನ್ ಪವರ್‌ಹೌಸ್ಕಡಲೆಕಾಯಿಯಲ್ಲಿ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಇ, ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ರಂಜಕ ಸಮೃದ್ಧವಾಗಿದೆ. ಈ ಪೋಷಕಾಂಶಗಳು ನಿಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತವೆ.

ಹೃದಯದ ಆರೋಗ್ಯ ಕಾಪಾಡುತ್ತದೆಕಡಲೆಕಾಯಿಯಲ್ಲಿರುವ ಮೊನೊಸಾಚುರೇಟೆಡ್ ಕೊಬ್ಬುಗಳು ಮತ್ತು ಸ್ಟೆರಾಲ್‌ಗಳು ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತವೆ. ಈ ಮೂಲಕ ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ ನಿರ್ವಹಣೆಕಡಲೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಹಾಗಾಗಿ ಅದು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಮಧುಮೇಹ ರೋಗಿಗಳಿಗೆ ಇದು ಪ್ರಯೋಜನಕಾರಿಯಾಗಿದೆ.

ತೂಕ ನಿಯಂತ್ರಣಕ್ಕೆ ಸಹಕಾರಿಕಡಲೆಕಾಯಿಯಲ್ಲಿರುವ ಪ್ರೊಟೀನ್ ಮತ್ತು ನಾರಿನಂಶವು  ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.  ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೆದುಳನ್ನು ಚುರುಕುಗೊಳಿಸುತ್ತದೆಕಡಲೆಕಾಯಿಯಲ್ಲಿರುವ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಮೆದುಳಿನ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ ಮತ್ತು ಸ್ಮರಣೆಯನ್ನು ಉತ್ತೇಜಿಸುತ್ತವೆ.

ಮೂಳೆಗಳನ್ನು ಬಲಪಡಿಸುತ್ತದೆಕಡಲೆಕಾಯಿಯಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕ ಮೂಳೆಗಳ ಆರೋಗ್ಯಕ್ಕೆ ಅಗತ್ಯವಾದ ಅಂಶಗಳಾಗಿವೆ. ಈ ಅಂಶಗಳು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತವೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತವೆ.

ಕ್ಯಾನ್ಸರ್ ತಡೆಗಟ್ಟುತ್ತದೆಕಡಲೆಕಾಯಿಯಲ್ಲಿರುವ ಪಾಲಿಫಿನಾಲ್‌ಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಈ ವಿಷಯಗಳನ್ನು ನೆನಪಿನಲ್ಲಿಡಿ

– ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಅತಿಯಾಗಿ ತಿನ್ನುವುದು ಪ್ರಯೋಜನಕ್ಕೆ ಬದಲಾಗಿ ಹಾನಿಯನ್ನುಂಟು ಮಾಡುತ್ತದೆ.

– ಕಡಲೆಕಾಯಿ ಸೇವನೆಯಿಂದ ಅಲರ್ಜಿ ಇದ್ದರೆ ಅದರಿಂದ ದೂರವಿರಿ.

– ಹಸಿ ಕಡಲೆಕಾಯಿಯನ್ನು ತಿನ್ನಬೇಡಿ. ಇದನ್ನು ಬೇಯಿಸಿ ಅಥವಾ ಹುರಿದು ತಿನ್ನಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...